ಅಕ್ರಮ ಮರಳು ಸಾಗಾಟ- ಇಬ್ಬರ ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 12. ನಗರದ ಕೊಟ್ಟಾರ ಚೌಕಿಯಿಂದ ಕೋಡಿಕಲ್ ಕಡೆಗೆ ಮಿನಿ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಉರ್ವ ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

 


ಬಂಧಿತರನ್ನು ಅಫ್ರಿದ್ ಮತ್ತು ಅಬ್ದುಲ್ ಸತ್ತಾರ್ ಎಂದು ಗುರುತಿಸಲಾಗಿದೆ. ಮಂಗಳವಾರದಂದು ಎಸ್.ಐ ಹರೀಶ್, ಇಬ್ಬರು ಸಿಬ್ಬಂದಿಯ ಜೊತೆ ಗಸ್ತು ನಿರತರಾಗಿದ್ದ ವೇಳೆ ಕೊಟ್ಟಾರ ಚೌಕಿಯಿಂದ ಕೋಡಿಕಲ್ ಕಡೆಗೆ ತೆರಳುತ್ತಿದ್ದ ಮಿನಿ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ 10 ಟನ್ ಮರಳನ್ನು ಆರೋಪಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ತಕ್ಷಣವೇ 11 ಸಾವಿರದ ಮೌಲ್ಯದ ಮರಳು ಮತ್ತು 5 ಲಕ್ಷ ರೂ. ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ.

Also Read  ಕಡಬ: ಎರಡು ತಿಂಗಳ ಹಿಂದೆ ನಿಯೋಜನೆಗೊಂಡ ಕ್ರೀಡಾಧಿಕಾರಿಯ ದಿಢೀರ್ ಬದಲಾವಣೆ

error: Content is protected !!
Scroll to Top