ಅ. 31ರಿಂದ ಮಂಗಳೂರು ಏರ್ಪೋರ್ಟ್ ಆಡಳಿತ ಸಂಪೂರ್ಣ ಅದಾನಿ ತೆಕ್ಕೆಗೆ…!

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 09. ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವು ಅಕ್ಟೋಬರ್ 31ರಿಂದ ಸಂಪೂರ್ಣವಾಗಿ ಅದಾನಿ ಸಮೂಹಕ್ಕೆ ಹಸ್ತಾಂತರಗೊಳ್ಳಲಿದೆ.


ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಸಹಿತ ಭಾರತದ 6 ವಿಮಾನ ನಿಲ್ದಾಣಗಳ ಆಡಳಿತ, ಅಭಿವೃದ್ಧಿ ಹಾಗೂ ನಿರ್ವಹಣೆಯ ಹಿನ್ನೆಲೆ ಏರ್ಪಡಿಸಲಾಗಿದ್ದ ಹರಾಜಿನಲ್ಲಿ ಮಂಗಳೂರು ಏರ್ಪೋರ್ಟ್ ಅದಾನಿ ಸಮೂಹಕ್ಕೆ ಒಳಗಾಗಿತ್ತು. ಬಳಿಕ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಜವಾಬ್ದಾರಿಯನ್ನು 2020ರ ಅಕ್ಟೋಬರ್ 30ರಂದು ಅದಾನಿ ಸಮೂಹ ಕೈಗೆತ್ತಿಕೊಂಡಿತ್ತು. ಒಪ್ಪಂದದ ಪ್ರಕಾರ ಮೂರು ವರ್ಷಗಳ ಕಾಲ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಹಾಗೂ ಅದಾನಿ ಸಮೂಹ ವಿಮಾನ ನಿಲ್ದಾಣದ ಆಡಳಿತವನ್ನು ಜಂಟಿಯಾಗಿ ನಿರ್ವಹಿಸಬೇಕು. ಎರಡೂ ಸಂಸ್ಥೆ ಸಮಾನ ವಿಮಾನ ನಿಲ್ದಾಣ ಸಿಬ್ಬಂದಿಯನ್ನು ನಿಯೋಜಿಸಬೇಕು.

Also Read  ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಇಲ್ಲದಿರುವುದು ಹಾಗು ಕೌಟಂಬಿಕ ಕಲಹಗಳು ಆಗುತ್ತಿದ್ದರೆ ಪೂಜೆ ಮಾಡುವಾಗ ಒಮ್ಮೆ ಈ ಮಂತ್ರ ಪಠಿಸಿ ಸಾಕು..!

ಈ ಷರತ್ತು ಅಕ್ಟೋಬರ್ 30ರಂದು ಅಂತ್ಯಗೊಳ್ಳಲಿರುವುದರಿಂದ ಅದಾನಿ ಸಮೂಹ ವಿಮಾನ ನಿಲ್ದಾಣದ ಆಡಳಿತವನ್ನು ಸಂಪೂರ್ಣವಾಗಿ ಕೈಗೆತ್ತಿಕೊಳ್ಳಲಿದೆ. ಅಕ್ಟೋಬರ್ 31ರಿಂದ ವಿಮಾನ ನಿಲ್ದಾಣದ ಹಣಕಾಸು, ಮಾನವ ಸಂಪನ್ಮೂಲ, ಆಡಳಿತ, ವಾಣಿಜ್ಯ, ಅಗ್ನಿಶಾಮಕ ಹಾಗೂ ಟರ್ಮಿನಲ್ ವಿಭಾಗವನ್ನು ಅದಾನಿ ಸಮೂಹ ನಿರ್ವಹಿಸಲಿದೆ. ವಿಮಾನ ಸಂಚಾರ ನಿಯಂತ್ರಣ (ಎಟಿಸಿ), ಕಾರ್ಗೊ ಹಾಗೂ ಸಿಎನ್‌ಎಸ್ ವಿಭಾಗವನ್ನು ಮಾತ್ರ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಿಸಲಿದೆ ಎನ್ನಲಾಗಿದೆ.

error: Content is protected !!
Scroll to Top