ಚೂಂತಾರು ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟರ ಸ್ಮರಣಾರ್ಥ – ವೆಂಕಟ್ರಮಣ ಭಟ್ ಮತ್ತು ಪದ್ಮನಾಭ ಭಟ್ಟರಿಗೆ ವೈದಿಕರಿಗೆ ಪುರಸ್ಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 06. ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ ಚೂಂತಾರುರವರ ಸ್ಮರಣಾರ್ಥ ವೈದಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಅವರ ಪುಣ್ಯತಿಥಿಯ ದಿನವಾದ ಅ. 03ರಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಆಶ್ರಯದಲ್ಲಿ ಚೂಂತಾರು ಉಪಾಸನದಲ್ಲಿ ನಡೆಯಿತು.

ಪ್ರಥಮ ವರ್ಷದ ಪುರಸ್ಕಾರವನ್ನು ಕೊಳ್ತಿಗೆ ಗ್ರಾಮದ ಚೌರ್ಕಾಡು ಮನೆತನದವರಾದ ದರ್ಬೆ ವೆಂಕಟ್ರಮಣ ಭಟ್ ಮತ್ತು ಐವರ್ನಾಡು ದೇವಸ್ಥಾನದ ಅರ್ಚಕರಾದ ಪರಕ್ಕಜೆ ಮೂಲದ ಪದ್ಮನಾಭ ಭಟ್ ರಿಗೆ ನೀಡಲಾಯಿತು.
ಪ್ರಶಸ್ತಿಯನ್ನು ರೂ. 5000/- ಮೊತ್ತದೊಂದಿಗೆ, ಸನ್ಮಾನ ಪತ್ರವನ್ನು ನೀಡಲಾಯಿತು. ನೀರಬಿದಿರೆ ಶಂಕರ ಭಟ್ ಸನ್ಮಾನ ನೆರವೇರಿಸಿದರು. ಮಾಧವ ಭಟ್ ಅಭಿನಂದನಾ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಮಹೇಶ್ ಭಟ್ ಚೂಂತಾರು, ಡಾ. ಮುರಲಿಮೋಹನ್ ಚೂಂತಾರು, ನಾಕೇಶ ಚೂಂತಾರು, ದಿ. ಚೂಂತಾರು ಲಕ್ಷ್ಮೀನಾರಾಯಣ ಭಟ್ಟರ ಸೊಸೆಯಂದಿರಾದ ಶ್ರೀಮತಿ ಗಂಗಾಲಕ್ಷ್ಮೀ, ಡಾ. ರಾಜರ್ಷಿ ಮೋಹನ್, ಪುತ್ರಿ ಶ್ರೀಮತಿ ಗೀತಾ, ಹಿರಿಯರಾದ ಆನೆಕಾರ ಗಣಪಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸನ್ಮಾನ ಸಮಿತಿ ಸಂಚಾಲಕರಾದ ಬೆಳಾಲು ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೂಂತಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಚೊಕ್ಕಾಡಿ ಶ್ರೀರಾಮ ದೇವಾಲಯಕ್ಕೆ ರೂ. 1 ಲಕ್ಷ ಮತ್ತು ಇತರ ಸಂಘ ಸಂಸ್ಥೆಗಳಿಗೆ ರೂ. 10 ಸಾವಿರ ದೇಣಿಗೆ ನೀಡಲಾಯಿತು.

Also Read  ಮಗುವಿಗೆ "ಸಿದ್ದರಾಮಯ್ಯ'' ಎಂದು ನಾಮಕರಣ ಮಾಡಿದ ಮಾಜಿ ಸಿಎಂ ಅಭಿಮಾನಿ

error: Content is protected !!
Scroll to Top