ಕಡಬ: ಸಾಕು ಪ್ರಾಣಿಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಮೇಯಲು ಬಿಟ್ಟರೆ ದಂಡ – ಪಟ್ಟಣ ಪಂಚಾಯತ್ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಅ. 05. ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಪ್ರದೇಶದಲ್ಲಿ ಸಾಕು ಪ್ರಾಣಿಗಳನ್ನು ಮೇಯಲು ಬಿಡುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆ ಅಂತಹ ಸಾಕುಪ್ರಾಣಿಗಳನ್ನು ವಶಕ್ಕೆ ಪಡೆದು ಮಾಲಕರಿಗೆ ದಂಡ ವಿಧಿಸುವ ಬಗ್ಗೆ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಮನೆಯಲ್ಲಿ ಸಾಕುತ್ತಿರುವ ಆಡು, ದನ- ಕರುಗಳನ್ನು ಬೇರೆಯವರ ಸ್ಥಳದಲ್ಲಿ ಸಾರ್ವಜನಿಕ ಪ್ರದೇಶ, ರಸ್ತೆಗಳಲ್ಲಿ ಮೇವುಗೆ ಬಿಡುತ್ತಿದ್ದು ಹಾಗೂ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳಿಗೆ ಕಟ್ಟುತ್ತಿರುವುದು ಪಟ್ಟಣ ಪಂಚಾಯತ್ ಗಮನಕ್ಕೆ ಬಂದಿರುತ್ತದೆ. ಅಲ್ಲದೇ ಈ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿರುತ್ತದೆ. ಇದರಿಂದ ಬೇರೆಯವರ ಕೃಷಿಗೆ ಹಾನಿಯುಂಟಾಗುತ್ತಿದ್ದು ಅಲ್ಲದೇ ರಸ್ತೆಗೆ ಬಿಡುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಹಾಗೂ ರಸ್ತೆ ಅಪಘಾತವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಕಡಬ ಪಟ್ಟಣ ಪಂಚಾಯತ್‌ನ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳು ಕಂಡು ಬಂದರೆ, ಅಂತಹ ಪ್ರಾಣಿಗಳನ್ನು ಬಂಧಿಸಿ, ಅದರ ವಾರಸುದಾರರಿಗೆ ದಂಡ ವಿಧಿಸಲಾಗುವುದು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರ ಮೂಲ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮನೆಯಿಂದ ಚಿನ್ನಾಭರಣ ದರೋಡೆ ಪ್ರಕರಣ ➤ ಸೊತ್ತು ಸಹಿತ ಇಬ್ಬರು ಅಂದರ್..!

error: Content is protected !!
Scroll to Top