KSATಯಲ್ಲಿ ಸರ್ಕಾರಿ ಟೈಪಿಸ್ಟ್ ಹುದ್ದೆಗಳು- ಅರ್ಹರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 05. ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು (KSAT) ವಿವಿಧ ಹುದ್ದೆಗಳ ನೇಮಕಾತಿ ನಡೆಸುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೂಡಲೇ ಅರ್ಜಿಗಳನ್ನು ನಿಗದಿತ ವಿಳಾಸಕ್ಕೆ ಅಂಚೆ ಮೂಲಕ ಅ. 31 ರೊಳಗೆ ಸಲ್ಲಿಸಬೇಕು ಎಂದು ತಿಳಿಸಿದೆ. ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (KSAT) ನಲ್ಲಿ ಒಟ್ಟು 6 ಟೈಪಿಸ್ಟ್ (Typist) ಹುದ್ದೆಗಳು ಖಾಲಿ ಇವೆ. ನೇಮಕಾತಿಯಲ್ಲಿ ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲಿಯೇ ಉದ್ಯೋಗ ಸಿಗಲಿದೆ.

ನೇಮಕಾತಿ ಪ್ರಕ್ರಿಯೆ ವಿವರ ಸಂಸ್ಥೆ ಹೆಸರು: ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (KSAT)

ಹುದ್ದೆ ಹೆಸರು: ಟೈಪಿಸ್ಟ್ ಖಾಲಿ ಹುದ್ದೆ ಸಂಖ್ಯೆ:

ಒಟ್ಟು 6 ತಿಂಗಳ ವೇತನ: 21,400 ರಿಂದ 42,000 ರೂಪಾಯಿ

ಪೋಸ್ಟಿಂಗ್: ಬೆಂಗಳೂರು

ಅರ್ಜಿ ಸಲ್ಲಿಕೆಗೆ ಕೊನೆ ದಿನ: ಅಕ್ಟೋಬರ್ 31

ಶೈಕ್ಷಣಿಕ ಅರ್ಹತೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ 10ನೇ ತರಗತಿ/ SSLC ಉತ್ತೀರ್ಣವಾಗಿರುವುದು ಕಡ್ಡಾಯ ಎಂದು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ತಿಳಿಸಿದೆ.

Also Read  ಕುಕ್ಕರ್ ಸ್ಫೋಟ ಪ್ರಕರಣ ➤ ಮಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಎನ್ಐಎ ದಾಳಿ

ವಯಸ್ಸಿನ ಮಿತಿ ಮತ್ತು ಸಡಿಲಿಕೆ

ಅರ್ಹ ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 31ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಇನ್ನೂ ವಯೋಮಿತಿಯಲ್ಲಿ ಪರಿಶಿಷ್ಟ ಜಾತಿ-ಪಂಗಡ,ಪ್ರವರ್ಗ-I ಅಭ್ಯರ್ಥಿಗಳಿಗೆ ಐದು ವರ್ಷ, ಪ್ರವರ್ಗ-2A/2B/3A ಮತ್ತು 3B ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದ್ದು, PWD ಮತ್ತು ವಿಧವಾ ಅಭ್ಯರ್ಥಿಗಳಿಗೆ ಒಟ್ಟು ಹತ್ತು ವರ್ಷಗಳು ವಯೋಮಿತಿ ಸಡಿಲಿಕೆ ಸಿಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಆಯ್ಕೆ, ವೇತನ, ಪೋಸ್ಟಿಂಗ್ ಮಾಹಿತಿ

ಅಭ್ಯರ್ಥಿಗಳು ಹತ್ತನೇ ತರಗತಿಯಲ್ಲಿ ಪಡೆದ ಮೆರಿಟ್ ಮತ್ತು ಸಂದರ್ಶನದ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 21,400ರಿಂದ 42,000 ರೂಪಾಯಿ ವೇತನ ನೀಡಲಾಗುವುದು. ಬೆಂಗಳೂರಿನಲ್ಲಿಯೇ ಪೋಸ್ಟಿಂಗ್ ನೀಡಲಾಗುವುದು ಎಂದು ನ್ಯಾಯಮಂಡಳಿ ತಿಳಿಸಿದೆ. ಅರ್ಜಿ ಶುಲ್ಕದ ಮಾಹಿತಿ ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-I ಮತ್ತು PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಅಭ್ಯರ್ಥಿಗಳಿಗೆ ಸಮಾನವಾಗಿ 150 ರೂ. ಶುಲ್ಕ ವಿಧಿಸಲಾಗಿದೆ. ಈ ಹಣವನ್ನು IPO/DD ವಿಧಾನ ಮೂಲಕ ಪಾವತಿಸುವಂತೆ ತಿಳಿಸಲಾಗಿದೆ. ಅರ್ಜಿ ಸಲ್ಲಿಕೆ ವಿಧಾನ ಮತ್ತು ವಿಳಾಸ ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಹಿತ ಭರ್ತಿ ಮಾಡಿದ ಅರ್ಜಿಯನ್ನು ಈ ವಿಳಾಸ ” ರಿಜಿಸ್ಟ್ರಾರ್, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ ರಸ್ತೆ, ಬೆಂಗಳೂರು-560009” ಇಲ್ಲಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Also Read  ಶರಣ್ ಪಂಪ್ ವೆಲ್ ಕ್ಷಮೆ ಯಾಚಿಸದಿದ್ದರೆ ಪ್ರತಿಭಟನೆ ➤ ಬಿರುವೆರ್ ಕುಡ್ಲ ಎಚ್ಚರಿಕೆ

error: Content is protected !!
Scroll to Top