ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಮನೆ ಮೇಲೆ ಇಡಿ ದಾಳಿ..!

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಅ. 05. ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರ ಮನೆ ಸೇರಿದಂತೆ ಇತರ ಕಡೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಗುರುವಾರ ನಸುಕಿನ ಜಾವ 3:30ರ ಸುಮಾರಿಗೆ ದಾಳಿ ನಡೆಸಿದ ಕುರಿತು ವರದಿಯಾಗಿದೆ.

ಡಿಸಿಸಿ ಬ್ಯಾಂಕ್​​ನಲ್ಲಿ ಚಿನ್ನದ ಮೇಲಿನ ಸಾಲದಲ್ಲಿ ನಕಲಿ ಬಂಗಾರವನ್ನಿಟ್ಟು ಸಾಲ ನೀಡಿದ ಆರೋಪದಡಿ ಬಹುಕೋಟಿ ಹಗರಣದಲ್ಲಿ ಮಂಜುನಾನಾಥ್ ಗೌಡ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಈ ವಿಚಾರದ ಕುರಿತು ಇಡಿ ಇಲಾಖೆಗೆ ದೂರು ಹೋದ ಪರಿಣಾಮ ತನಿಖೆಯನ್ನು ಪ್ರಾರಂಭಿಸಿದ ಇಡಿ ಅಧಿಕಾರಿಗಳು ಇಂದು ಮೂರನೇ ಬಾರಿ ದಾಳಿ ನಡೆಸಿದ್ದಾರೆ. ಆರ್.ಎಂ.ಮಂಜುನಾಥ ಗೌಡ ಅವರ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಕಟ್ಟೆ ಬಳಿಯ ಕರಕುಚ್ಚಿಯ ಮನೆ, ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯ ಮನೆ, ಶಿವಮೊಗ್ಗದ ಶರಾವತಿ ನಗರದ ಸಂಬಂಧಿಕರ ಮನೆ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಯಲ್ಲಿ ದೆಹಲಿ ಹಾಗೂ ಗೋವಾದ ಇಡಿ ಅಧಿಕಾರಿಗಳು ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Also Read  ”ರಾಷ್ಟ್ರೀಯ ಪ್ರಶಸ್ತಿ ಬಗ್ಗೆ ಕನಸಲ್ಲೂ ಊಹಿಸಿರಲಿಲ್ಲ”        ಸಿನಿಮಾ ನಿರ್ದೇಶಕ ದಿನೇಶ್ ಶೆಣೈ      

error: Content is protected !!
Scroll to Top