(ನ್ಯೂಸ್ ಕಡಬ) newskadaba.com ಮಂಗಳೂರು, ಅ. 05. ಲಾರಿಯೊಂದಕ್ಕೆ ವಿದ್ಯುತ್ ತಂತಿ ಸಿಲುಕಿದ ಪರಿಣಾಮ, ವಿದ್ಯುತ್ ಕಂಬವೊಂದು ಕಿತ್ತು ರಸ್ತೆಗೆ ವಾಲಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ವಾಹನ ಸವಾರರು ಪಾರಾದ ಘಟನೆ ತುಂಬೆ ಬಳಿ ನಡೆದಿದೆ.
ಬೆಂಗಳೂರಿನಿಂದ ಎಚ್‌ಪಿಸಿಎಲ್ ಗೆ ತೆರಳುತ್ತಿದ್ದ ಲಾರಿಯ ಹಿಂಬಾಂಗದಲ್ಲಿ ಲೋಡ್ ಆಗಿದ್ದ ಕೆಲವು ವಸ್ತುಗಳಿಗೆ ರಸ್ತೆ ಬದಿಯ ವಿದ್ಯುತ್ ಕಂಬದ ತಂತಿಗಳು ಸಿಲುಕಿದೆ. ಇದರ ಅರಿವಿರದ ಚಾಲಕ ಲಾರಿಯನ್ನು ಮುಂದಕ್ಕೆ ಚಲಾಯಿಸಿದಾಗ ವಿದ್ಯುತ್ ತಂತಿಗಳು ಎಳೆದಾಡಿದಂತಾಗಿ, ವಿದ್ಯುತ್ ಕಂಬವು ರಸ್ತೆಗೆ ವಾಲಿಕೊಂಡು ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದಿದ್ದವು. ಈ ರಸ್ತೆಯಲ್ಲಿ ಹಲವು ವಾಹನಗಳು ಸಂಚರಿಸುತ್ತಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ದೌಡಾಯಿಸಿ ವಿದ್ಯುತ್ ತಂತಿಗಳನ್ನು ತೆಗೆದು ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.