ಗುದದ್ವಾರದಲ್ಲಿಟ್ಟು ಅಕ್ರಮ ಚಿನ್ನಸಾಗಾಣೆ – ಮಹಿಳೆ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಮಂಗಳೂರು, . 05. ಗುದದ್ವಾರದಲ್ಲಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಅ. 04 ರಂದು ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮಹಿಳೆಯ ತಪಾಸಣೆ ವೇಳೆ ಡಿಟೆಕ್ಟರ್ ನಲ್ಲಿ ಬೀಪ್ ಶಬ್ದ ಬಂದಿದ್ದ, ಈ ವೇಳೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಧೃಡಪಟ್ಟಿದೆ. ಎರಡು ಗೋಳಾಕಾರದ ಕ್ಯಾಪ್ಸುಲ್ ಮಾದರಿಗಳಲ್ಲಿ ಪೇಸ್ಟ್ ರೂಪದ ಚಿನ್ನವನ್ನು ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ಸಾಗಣೆ ಮಾಡುತ್ತಿದ್ದು, 24 ಕ್ಯಾರೆಟ್‌ನ 345 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ 20,41,650 ರೂ. ಎಂದು ಅಂದಾಜಿಸಲಾಗಿದೆ.

Also Read  ಬೈಕ್ ಗಳ ನಡುವೆ ಭೀಕರ ಅಪಘಾತ ➤ ಇಬ್ಬರು ಮೃತ್ಯು, ಓರ್ವ ಗಂಭೀರ

error: Content is protected !!
Scroll to Top