ಯುವತಿ ಕಾಣೆ- ಪತ್ತೆಗೆ ಕೋರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 04. ನಗರದ ಅಭಿಮಾನ್ ಮ್ಯಾನ್ಷನ್ ಫ್ಲ್ಯಾಟ್ ನಲ್ಲಿ ವಾಸವಾಗಿದ್ದ ಆಸ್ಟಿಯ ಸಮ್ರೀನ್ (22) ಎಂಬಾಕೆ ಅ. 01 ರಂದು ಕಾಣೆಯಾಗಿದ್ದು, ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಚಹರೆ ಇಂತಿವೆ:-

ಎತ್ತರ 5.2 ಅಡಿ, ಬಿಳಿ ಮೈ ಬಣ್ಣ, ಸಾಧಾರಣ ಮೈಕಟ್ಟು, ಕಾಣೆಯಾಗುವಾಗ ಹಸಿರು ಬಣ್ಣದ ಚೂಡಿದಾರ ಟಾಪ್, ತಿಳಿ ಗ್ರೇ ಬಣ್ಣದ ಪ್ಯಾಂಟ್ ಶಾಲು ಹಾಕಿರುತ್ತಾರೆ. ಹಿಂದಿ, ಉರ್ದು, ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರು ಪತ್ತೆಯಾದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ:0824-2220520, ಪೊಲೀಸ್ ಕಂಟ್ರೋಲ್ ರೂಂ 0824-2220800 ಗೆ ಕರೆ ಮಾಡಿ ಸಂಪರ್ಕಿಸುವಂತೆ ಮಂಗಳೂರು ಪೂರ್ವ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಡ್ರಗ್ಸ್ ಮಾರಾಟ ➤ ನೈಜೀರಿಯಾದ ಮೂವರು ಆರೋಪಿಗಳ ಬಂಧನ

error: Content is protected !!
Scroll to Top