ಕೊಲೆ ಪ್ರಕರಣದ ಆರೋಪಿಯ ಹತ್ಯೆ – ಮೃತದೇಹ ಪೊದೆಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, 02. ಕೊಲೆ ಪ್ರಕರಣದ ಆರೋಪಿಯೋರ್ವನನ್ನು ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಮೃತದೇಹವನ್ನು ಪೊದೆಗೆ ಎಸೆದಿರುವ ಘಟನೆ ಕುಂಬಳೆಯಲ್ಲಿ ನಡೆದಿದೆ.

ಮೃತನನ್ನು ಕುಂಬಳೆ ಶಾಂತಿ ಪಳ್ಳದ ಅಬ್ದುಲ್ ರಶೀದ್ (38) ಎಂದು ಗುರುತಿಸಲಾಗಿದೆ. ಈತನ ಮೃತದೇಹವು ಕುಂಬಳೆಯಿಂದ ಸ್ವಲ್ಪ ದೂರದ ಪೊದೆಯೊಂದರಲ್ಲಿ ಇಂದು ಬೆಳಿಗ್ಗೆ  ಪತ್ತೆಯಾಗಿದೆ. ಈತ ಮಧೂರು ಪಟ್ಲದ ಶಾನ್ ವಾಜ್ ( 24) ಕೊಲೆ ಪ್ರಕರಣದ ಆರೋಪಿಯಾಗಿದ್ದ ಎನ್ನಲಾಗಿದೆ. ಇಂದು ಬೆಳಿಗ್ಗೆ ಮೈದಾನಕ್ಕೆ ಆಟವಾಡಲು ಬಂದಿದ್ದ ಮಕ್ಕಳು ಮೈದಾನದಲ್ಲಿ ರಕ್ತದ ಕಲೆಗಳನ್ನು ಕಂಡು ಪರಿಸರ ವಾಸಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ನಡೆದ ಶೋಧ ದಿಂದ ಮೈದಾನ ದಿಂದ 50 ಮೀಟರ್ ದೂರದ ಪೊದೆಯೊಂದರಲ್ಲಿ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕುಂಬಳೆ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

Also Read  ಅಕ್ರಮ ಗೋಸಾಗಾಟ ಪತ್ತೆ ►14 ಗೋವುಗಳನ್ನು ವಶಪಡಿಸಿದ ವಿಟ್ಲ ಪೊಲೀಸರು

 

ಇನ್ನು ರಶೀದ್ 2019ರ ಅಕ್ಟೋಬರ್ 18 ರಂದು ಶಾನು ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ನಗರದ ನಾಯಕ್ಸ್ ರಸ್ತೆಯ ಸಮೀಪ ಜನವಾಸ ಇಲ್ಲದ ಮನೆಯ ಬಾವಿಗೆ ಶಾನ್ ಮೃತದೇಹವನ್ನು ಎಸೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ರಶೀದ್ ಸೇರಿದಂತೆ ನಾಲ್ವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದರು. ರಶೀದ್ ವಿರುದ್ಧ ಕುಂಬಳೆ, ಕಾಸರಗೋಡು ನಗರ ಠಾಣೆ ಗಳಲ್ಲಿ ಹಲವು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Also Read  ಕ್ರೂರವಾಗಿ ಮೂರು ಮೇಕೆಗಳನ್ನು ಬಲಿ ನೀಡಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

error: Content is protected !!
Scroll to Top