ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ ಸಾಲು ಸಾಲು ರಜೆ..!

(ನ್ಯೂಸ್ ಕಡಬ) newskadaba.com ನವದೆಹಲಿ, . 02. ಪ್ರತೀ ತಿಂಗಳುಗಳು ಪ್ರಾರಂಭವಾಗುವ ಮುನ್ನ ಆಯಾ ತಿಂಗಳ ಬ್ಯಾಂಕ್ ಗಳ ರಜೆಗೆ ಸಂಬಂಧಿಸಿದಂತೆ ಆರ್.ಬಿಐ ರಜಾ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಅಕ್ಟೋಬರ್ ತಿಂಗಳ ರಜಾಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಅಕ್ಟೋಬರ್‌ ತಿಂಗಳಲ್ಲಿ ಸಾಲು ಸಾಲು ಹಬ್ಬಗಳದ್ದೇ ಮಾತು. ಅದರಂತೆ ದಸರಾ ಹಬ್ಬ ಇದೇ ತಿಂಗಳಲ್ಲಿ ನಡೆಯಲಿರುವ ಕಾರಣ ದೇಶದಾದ್ಯಂತ ಬ್ಯಾಂಕುಗಳಿಗೆ ಸಾಲು ಸಾಲು ರಜೆಗಳಿರುತ್ತವೆ.

ಅಕ್ಟೋಬರ್ ತಿಂಗಳ ಬ್ಯಾಂಕ್ ರಜಾಪಟ್ಟಿ ಈ ಕೆಳಗಿನಂತಿವೆ:-

ಅ. 14 ರಂದು ಮಹಾಲಯ ಅಮವಾಸ್ಯೆ ರಜೆ, ಅ. 23ಕ್ಕೆ ಮಹಾನವಮಿ/ ಆಯುಧ ಪೂಜೆಯ ರಜೆ. ಅ. 24ರಂದು ವಿಜಯ ದಶಮಿಯ ರಜೆ.  ಅಕ್ಟೋಬರ್‌ ತಿಂಗಳ 15, 22, 29 ರಂದು ಭಾನುವಾರದ ರಜೆಯಾದರೆ, ಅ. 28ಕ್ಕೆ ನಾಲ್ಕನೇ ಶನಿವಾರದ ರಜೆಯೂ ಸಿಗಲಿದೆ. ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ರಜಾ ದಿನಗಳಂದು ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಖುದ್ದು ಬ್ಯಾಂಕಿಗೆ ಭೇಟಿಯಾಗಿ ಮಾಡುವ ಕೆಲಸವಿದ್ದಲ್ಲಿ ರಜಾ ದಿನಗಳ ಬಗ್ಗೆ ನೋಡಿಕೊಳ್ಳುವುದು ಉತ್ತಮ.

Also Read  ಭಟ್ಕಳ :ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ.!

error: Content is protected !!
Scroll to Top