ತನ್ನ ಸಹಪಾಠಿಗಳ ನಿಂದನೆ ಮೇಘನಾ ಆತ್ಮಹತ್ಯೆಗೆ ಮುಳುವಾಯ್ತಾ.? ► ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಸೋತಿದ್ದ ಮೇಘನಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.09. ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಪಾಲ್ಗೊಂಡು ಸೋತಿದ್ದ ಹಿನ್ನೆಲೆಯಲ್ಲಿ ಬುಧವಾರದಂದು ಆತ್ಮಹತ್ಯೆಗೆ ಶರಣಾಗಿದ್ದ ಕುಮಾರಸ್ವಾಮಿ ಲೇಔಟ್‍ನ ದಯಾನಂದಸಾಗರ ಕಾಲೇಜಿನ 2 ನೇ ಸೆಮಿಸ್ಟರ್ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘನಾ(18) ಪ್ರಕರಣಕ್ಕೆ ಇದೀಗ ಮಹತ್ವದ ಟ್ವಿಸ್ಟ್ ದೊರೆತಿದ್ದು, ತನ್ನ ಸಹಪಾಠಿಗಳೇ ಬೈದು ನಿಂದಿಸುತ್ತಿರುವ ವೀಡಿಯೋ ವೈರಲ್ ಆಗಿದೆ.

ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಸೋತಿದ್ದಕ್ಕೆ ವಿಜೇತ ಪಕ್ಷದವರು ಹಂಗಿಸಿದ್ದ ಕಾರಣ ಬೇಸರಗೊಂಡು ಮೇಘನಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿತ್ತು. ಆದರೆ ಮೇಘನಾ ಸಹಪಾಠಿಗಳಾದ ಸೌದಾಮಿನಿ, ನಿಖಿಲ್, ಸಂದೀಪ್, ಪೂಜಾ, ಸಂದ್ಯಾ ಮತ್ತು ನಿಖಿತಾ, ಮೇಘನಾಳನ್ನು ಹೀನಾಯವಾಗಿ ಬೈದಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ತನಿಖೆಯ ಸ್ವರೂಪವನ್ನು ಬದಲಿಸಿದೆ.

Also Read  ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ

 

error: Content is protected !!
Scroll to Top