ಪ್ರವಾದಿ (ಸ.ಅ) ರವರ ಜನನದಲ್ಲಿ ಸಂತೋಷ ವ್ಯಕ್ತಪಡಿಸಲು ಮುಅ್-ಮಿನ್ ಆದವನಿಗೆ ಮಾತ್ರ ಸಾಧ್ಯ- ಬಹು| ಇಬ್ರಾಹಿಂ ಸ‌ಅದಿ ಮಾಣಿ

(ನ್ಯೂಸ್ ಕಡಬ) newskadaba.com ಮಾಣಿ, ಅ. 02. ಪ್ರವಾದಿ(ಸ.ಅ) ರವರ ಜನನದಲ್ಲಿ ಸಂತೋಷ ವ್ಯಕ್ತ ಪಡಿಸಲು ಮುಅ್-ಮಿನ್ ಗಳಿಂದ‌ ಮಾತ್ರ ಸಾಧ್ಯ ಅದಕ್ಕೆ ಈಮಾನ್ ಬೇಕು‌, ಈಮಾನ್ ಇಲ್ಲದವರಿಂದ‌ ಸಂತೋಷ ವ್ಯಕ್ತಪಡಿಸಲು ಸಾಧ್ಯವಾಗದು ಎಂದು ಕರ್ನಾಟಕ ಮುಸ್ಲಿಂ ಜಮಾ‌ಅತ್ ಮಾಣಿ ಸರ್ಕಲ್ ಇದರ‌ ಅಧ್ಯಕ್ಷರಾದ ಬಹು. ಇಬ್ರಾಹಿಂ ಸ‌ಅದಿ ಉಸ್ತಾದ್ ಮಾಣಿ ಹೇಳಿದರು. ಅವರು ಕರ್ನಾಟಕ ಮುಸ್ಲಿಂ ಜಮಾ‌ಅತ್, ಸುನ್ನೀ ಯುವಜನ ಸಂಘ ಹಾಗೂ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಸೂರಿಕುಮೇರು ಯುನಿಟ್ ಇದರ ವತಿಯಿಂದ ಕೆಸಿಎಫ್ ನಯೀಫ್ ಸೆಕ್ಟರ್ ಕಾರ್ಯದರ್ಶಿ ಆಸಿಫ್ ಸೂರಿಕುಮೇರುರವರ ನಿವಾಸದಲ್ಲಿ ನಡೆದ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ಕಾರ್ಯಕ್ರಮದಲ್ಲಿ ಮದ್‌ಹುರ್ರಸೂಲ್ ಭಾಷಣ ಮಾಡಿದರು.

Also Read  ಮಂಗಳೂರು: ಮಾದಕ ವಸ್ತು ಸೇವನೆ    ಯುವಕ ಅರೆಸ್ಟ್

ಎಸ್‌ವೈ‌ಎಸ್ ಮಾಣಿ ಸರ್ಕಲ್ ಅಧ್ಯಕ್ಷರಾದ ಬಹು: ಹೈದರ್‌ ಸಖಾಫಿ‌ ಶೇರಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಶ್ರಫ್ ಸಖಾಫಿ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್‌ಗೆ ನೇತೃತ್ವ ನೀಡಿದರು. ಅಜ್ಮಲ್ ಮಾಣಿ ಬೈತ್ ಆಲಾಪನೆ ನಡೆಸಿದರು. ಕಾರ್ಯಕ್ರಮದಲ್ಲಿ ನಾಯಕರುಗಳಾದ ಅಬ್ದುಲ್ ಕರೀಂ ನೆಲ್ಲಿ ಸೂರಿಕುಮೇರು, ಯೂಸುಫ್ ಹಾಜಿ ಸೂರಿಕುಮೇರು, ಎಸ್ ಆರ್ ಸುಲೈಮಾನ್ ಸೂರಿಕುಮೇರು, ಹನೀಫ್ ಸಂಕ, ಹಂಝ ಸೂರಿಕುಮೇರು, ಫತ್ತಾಹ್ ಮಾಣಿ, ಇಬ್ರಾಹಿಂ ಮಾಣಿ, ಉಮ್ಮರ್ ಸೂರಿಕುಮೇರು, ಮುಬಶ್ಶಿರ್ ಹಿಕಮಿ ಸೂರಿಕುಮೇರು, ಹಾಫಿಳ್ ಅನಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.‌ ಸಲೀಂ ಮಾಣಿ ಸ್ವಾಗತಿಸಿ ಧನ್ಯವಾದಗೈದರು.

error: Content is protected !!
Scroll to Top