ವ್ಯಾಪಾರಿಗೆ 75 ಲಕ್ಷ ರೂ. ವಂಚನೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 01. ಕೃಷಿ ಉತ್ಪನ್ನಗಳ ವ್ಯಾಪಾರಿಯೊಬ್ಬರಿಗೆ ವ್ಯಕ್ತಯೋರ್ವ 75 ಲಕ್ಷ ರೂ. ವಂಚಿಸಿರುವ ಘಟನೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.


ವಂಚನೆಗೊಳಗಾದವರನ್ನು ಅಬ್ದುಲ್ ರಹಿಮಾನ್ ಬಾವಾ ಎನ್ನಲಾಗಿದೆ. ಇವರು ಮಹಾರಾಷ್ಟ್ರದ ಸೋಲಾಪುರದ ಸಿದ್ದೇಶ್ವರ ಟ್ರೇಡರ್ಸ್ ನ ಕುಂಡಲಿಕ್ ಜುಂಬಾರ್ ಖಂಡಾಗಲೆ ಎಂಬವರು ತನ್ನ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

2021ರ ಜನವರಿಯಲ್ಲಿ ದೂರುದಾರರಿಗೆ ಮಂಗಳೂರು ಮತ್ತು ಚೆನ್ನೈನಲ್ಲಿ ವ್ಯವಹಾರ ಹೊಂದಿರುವ ಈರುಳ್ಳಿ ವ್ಯಾಪಾರಿ ಕುಂಡಲಿಕ್ ಜುಂಬಾರ್ ಖಂಡಾಗಲೆ ಅವರ ಪರಿಚಯವಾಗಿದ್ದು, ಬಳಿಕ ಇತರ ಕೃ ಷಿ ಉತ್ಪನ್ನಗಳ ವ್ಯವಹಾರಗಳ ಮೂಲಕ ಆತ್ಮೀಯರಾಗಿದ್ದರು ಎನ್ನಲಾಗಿದೆ. ನಂತರ ಆರೋಪಿ ಕುಂಡಲಿಕ್ ಜುಂಬಾರ್ ಖಂಡಾಗಲೆ ಅಬ್ದುಲ್ ರಹಿಮಾನ್ ಬಾವಾ ಅವರಿಗೆ ವಂಚಿಸುವ ಉದ್ದೇಶದಿಂದ ವ್ಯವಹಾರದಲ್ಲಿ ಒಳ್ಳೆಯ ಹೂಡಿಕೆ ಅವಕಾಶ ಇದೆ ಎಂಬುದಾಗಿ ನಂಬಿಸಿ ಆತನ ಮಾಲಿಕತ್ವದ ಸಿದ್ದೇಶ್ವರ ಟ್ರೇಡರ್ಸ್‌ನ ಬ್ಯಾಂಕ್ ಖಾತೆಗೆ ಬಾವಾರ ಬ್ಯಾಂಕ್ ಖಾತೆ ಯಿಂದ ವಿವಿಧ ದಿನಗಳಲ್ಲಿ ಹಣ ವರ್ಗಾಯಿಸಿಕೊಂಡು ನಂತರ ವಾಪಾಸು ನೀಡದೆ ವಂಚಿಸಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Also Read  ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಪಾಣೆಮಂಗಳೂರು ಹಾಗೂ ಯೇನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಭಾಗಿತ್ವ ➤ ಸಾರ್ವಜನಿಕ ರಕ್ತದಾನ ಶಿಬಿರ ಮತ್ತು ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

error: Content is protected !!
Scroll to Top