ಏಶ್ಯನ್ ಗೇಮ್ಸ್- ಶೂಟಿಂಗ್ ನಲ್ಲಿ ಮತ್ತೊಂದು ಚಿನ್ನ ಗೆದ್ದ ಭಾರತ

(ನ್ಯೂಸ್ ಕಡಬ) newskadaba.com ಚೀನಾ, ಅ. 01. ಮಹಿಳೆಯರ ಗಾಲ್ಫ್ ಪಂದ್ಯದಲ್ಲಿ ಅದಿತಿ ಅಶೋಕ್ ಚಾರಿತ್ರಿಕ ಬೆಳ್ಳಿ ಪದಕ ಜಯಿಸಿದ ನಂತರ ಭಾರತದ ಶೂಟರ್ ಗಳು ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತನ್ನದಾಗಿಸಿದ್ದಾರೆ. ಇದರೊಂದಿಗೆ ಪುರುಷರ ಶಾಟ್ ಪುಟ್ ಫೈನಲ್ ನಲ್ಲಿ ತಜಿಂದರ್ ಪಾಲ್ ಸಿಂಗ್ ತೂರ್ ಹಾಗೂ ಸಾಹಿಬ್ ಸಿಂಗ್ ಸ್ಪರ್ಧಿಸಲಿದ್ದಾರೆ.


ಅಲ್ಲದೇ ಆಟಗಾರರಾದ ಬಾಕ್ಸರ್ ನಿಖತ್ ಝರೀನ್, ಅಥ್ಲೀಟ್ ಗಳಾದ ಜ್ಯೋತಿ ಯರ್ರಾಜಿ ಹಾಗೂ ಅವಿನಾಶ್ ಸಬ್ಲೆ ಕೂಡಾ ಭಾರತದ ಪರವಾದ ಮುಖ್ಯ ಸ್ಪರ್ಧಿಗಳಾಗಿದ್ದಾರೆ. ಈಗಾಗಲೇ ಕಂಚು ಪದಕವನ್ನು ಖಾತ್ರಿಪಡಿಸಿಕೊಂಡಿರುವ ನಿಖತ್, ರವಿವಾರದಂದು ಉತ್ತಮ ಪದಕದತ್ತ ಗುರಿಯಿಡಲಿದ್ದಾರೆ. ಇವರೊಂದಿಗೆ ಭಾರತದ ಶೂಟರ್ ಗಳೂ ಕೂಡಾ ಪದಕ ಬೇಟೆಗಾಗಿ ಮುಂಚೂಣಿಯಲ್ಲಿದ್ದಾರೆ.

Also Read  ಡ್ರಗ್ಸ್​ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಸಹಪಾಠಿಯ ಮೇಲೆ ನಾಲ್ವರು ವಿದ್ಯಾರ್ಥಿನಿಯರಿಂದ ಹಲ್ಲೆ 

error: Content is protected !!
Scroll to Top