ನಟ ನಾಗಭೂಷಣ್ ಅವರ ಕಾರು ಢಿಕ್ಕಿ- ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 01. ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಗುರುತಿಸಿಕೊಂಡಿರುವ ನಟ ನಾಗಭೂಷಣ್​ ಅವರ ಕಾರು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆ ಮೃತಪಟ್ಟಿರುವ ಘಟನೆ ಶನಿವಾರದಂದು ತಡರಾತ್ರಿ ಕೋಣನಕುಂಟೆ ಕ್ರಾಸ್​ ಬಳಿ ನಡೆದಿದೆ.

ಮೃತ ಮಹಿಳೆಯನ್ನು ಪ್ರೇಮಾ​ ಎಸ್​( 48) ಎಂದು ಗುರುತಿಸಲಾಗಿದೆ. ಪ್ರೇಮಾ ದಂಪತಿಯು ಫುಟ್​ ಪಾತ್​ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ನಾಗಭೂಷಣ್​ ಅವರ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಪ್ರೇಮಾ ಮೃತಪಟ್ಟರೆ, ಅವರ ಪತಿ ಕೃಷ್ಣ ಬಿ. ಎಂಬವರು ತೀವ್ರ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಮೃತರ ಪುತ್ರ ಪಾರ್ಥ ಕೆ. ಎಂಬವರು ನೀಡಿದ ದೂರಿನಂತೆ ಕುಮಾರಸ್ವಾಮಿ ಲೇಔಟ್​ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಿಸಲಾಗಿದೆ.

Also Read  ಎಂಡೋಸಲ್ಪಾನ್ ಸಂತ್ರಸ್ತೆಯ ಅತ್ಯಾಚಾರ ಪ್ರಕರಣ - ಆರೋಪಿಗೆ 10 ವರ್ಷ ಶಿಕ್ಷೆ ಪ್ರಕಟ

error: Content is protected !!
Scroll to Top