ಅರಂತೋಡು: ಸಂಭ್ರಮದ ಈದ್ ಮಿಲಾದ್ ಆಚರಣೆ- ಆಕರ್ಷಕ ರ‍್ಯಾಲಿ

(ನ್ಯೂಸ್ ಕಡಬ) newskadaba.com ಅರಂತೋಡು, ಸೆ. 29. ಬದ್ರಿಯಾ ಜುಮಾ ಮಸೀದಿ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಮತ್ತು ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇವುಗಳ ಜಂಟಿ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್(ಸ.ಅ) ಪೈಗಂಬರರ ಜನ್ಮ ದಿನಾಚರಣೆಯ ಈದ್ ಮಿಲಾದನ್ನು ಸಂಭ್ರಮದಿಂದ ಆಚರಿಸಲಾಯಿತು ಮತ್ತು ಆಕರ್ಷಕ ಕಾಲ್ನಡಿಗೆ ಜಾಥಾ ನಡೆಯಿತು.

ಮದರಸ ವಿದ್ಯಾರ್ಥಿಗಳಿಂದ ಪ್ರವಾದಿ ಕುರಿತ ಕೀರ್ತನೆಗಳು, ಆಲಾಪನೆ, ಪ್ಲವರ್ ಶೋ, ದಫ್ ಸ್ಪರ್ದೆ, ಬುರ್ಧಾ ಮಜ್ಲೀಸ್ ಕಾರ್ಯಕ್ರಮವು ಮರ್ ಹೂಮ್ ಡಾ|ಕೆ.ಎಂ. ಶಾಹ್ ಮುಸ್ಲಿಯಾರ್ ವೇದಿಕೆಯಲ್ಲಿ ನಡೆಯಿತು. ಸಮಾರಂಭವನ್ನು ಜುಮಾ ಮಸೀದಿ ಖತೀಬರಾದ ಅಲ್ ಹಾಜ್ ಇಸಾಕ್ ಬಾಖವಿ ಉದ್ಘಾಟಿಸಿ ಈದ್ ಹಬ್ಬದ ಸಂದೇಶವನ್ನು ನೀಡಿದರು. ಅದ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ ವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಟ್ರೋಫಿಯನ್ನು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ನ ಗೌರವಾಧ್ಯಕ್ಷರು ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ.ಶಹೀದ್ ತೆಕ್ಕಿಲ್ ವಿತರಿಸಿ, ಅರಂತೋಡಿನ ಯುವಕರ ಶಿಸ್ತಬದ್ದವಾದ ಸಂಘಟನೆ ಮತ್ತು ಕಾರ್ಯಕ್ರಮ ಸಂಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸದರ್ ಅಫ್ರೀದ್ ಮಖ್ದೂಮಿ, ಸಹಾಯಕ ಅಧ್ಯಾಪಕ ಶಾಫಿ ಮುಸ್ಲಿಯಾರ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘಟಿಸಿದರು.
ವೇದಿಕೆಯಲ್ಲಿ ಜಮಾಅತ್ ಉಪಾಧ್ಯಕ್ಷ ಹಾಜಿ ಕೆ. ಎಂ. ಮಹಮ್ಮದ್, ಕಾರ್ಯದರ್ಶಿ ಕೆ. ಎಂ. ಮೂಸಾನ್, ಕೋಶಾಧಿಕಾರಿ ಕೆ. ಎಂ. ಅಬೂಬಕ್ಕರ್ ಪಾರೆಕ್ಕಲ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಮಜೀದ್, ಕಾರ್ಯದರ್ಶಿ ಎಸ್. ಇ. ಜುಬೈರ್, ಕೋಶಾಧಿಕಾರಿ ಹಾಜಿ ಅಝರುದ್ದೀನ್, ದ್ಸಿಕ್ರ್ ಸ್ವಲಾತ್ ಉಪಾಧ್ಯಕ್ಷ ಕೆ.ಎಸ್. ಇಬ್ರಾಹಿಂ ಕುಕ್ಕುಂಬಳ ಬಿಳಿಯಾರು, ದುಬೈ ಸಮಿತಿ ಗೌರವಾಧ್ಯಕ್ಷ ಬದ್ರುದ್ದೀನ್ ಪಟೇಲ್, ಉಪಾಧ್ಯಕ್ಷ ಸೈಫುದ್ದೀನ್ ಪಟೇಲ್, ಸದಸ್ಯರಾದ ಕೆ. ಎಮ್. ಅನ್ವರ್, ಸಿನಾನ್ ಕುನ್ನಿಲ್, ರಹೀಮ್, ಉದ್ಯಮಿ ತ್ವಯ್ಯೂಬ್, ನುಸ್ರತುಲ್ ಇಸ್ಲಾಂ ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ, ಸದಸ್ಯರಾದ ಎ. ಹನೀಫ್, ಸಂಶುದ್ದೀನ್ ಪೆಲ್ತಡ್ಕ, ಮಾಜಿ ಅಧ್ಯಕ್ಷರುಗಳಾದ ಹಾಜಿ ಎ. ಅಹಮ್ಮದ್ ಕುಂಞ ಪಟೇಲ್, ಹಾಜಿ ಎಸ್. ಇ. ಮಹಮ್ಮದ್, ಅಬ್ದುಲ್ ಖಾದರ್ ಪಟೇಲ್, ಮೊಯಿದು ಕುಕ್ಕುಂಬಳ, ಮನ್ಸೂರ್ ಪಾರೆಕ್ಕಲ್, ಮುಜೀಬ್, ತಾಜುದ್ದೀನ್ ಅರಂತೋಡು, ಸಂಶುದ್ದೀನ್ ಕ್ಯೂರ್, ಮುಝಮ್ಮಿಲ್ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು. ವಿವಿದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಮಗ್ರ ಚಾಂಪಿಯನ್ ಆಗಿ ಬುಲ್ ಬುಲ್ ತಂಡ ಪ್ರಥಮ ಸ್ಥಾನವನ್ನು ಪಡೆದರೆ ದ್ವಿತೀಯ ಸ್ಥಾನವನ್ನು ಹುದ್ ಹುದ್ ತಂಡ ಪಡೆಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಸಮಸ್ತ ವಾರ್ಷಿಕ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Also Read  ಆಸ್ಪತ್ರೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರ ಪತ್ರ ಕಡ್ಡಾಯ

error: Content is protected !!
Scroll to Top