ರಸ್ತೆ ಕಾಮಗಾರಿ ಹಿನ್ನೆಲೆ ಮರಗಳ ಕಡಿತ- ಆಕ್ಷೇಪಣೆಗಳಿಗೆ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 25. ರಾಜ್ಯದ ಮಂಗಳೂರು – ತುಮಕೂರು ಭಾಗದ ರಾಷ್ಟ್ರೀಯ ಹೆದ್ದಾರಿ–73ರ 40 ಕಿ.ಮೀ. (ಪುಂಜಾಲ್‍ಕಟ್ಟೆ)ರಿಂದ 75 ಕಿ.ಮೀ. (ಚಾರ್ಮಾಡಿ) ವರೆಗೆ ರಸ್ತೆಯನ್ನು ಮಧ್ಯಮ ಪಥ ರಸ್ತೆಯಿಂದ ಭುಜಗಳುಳ್ಳ ದ್ವಿಪಥ ರಸ್ತೆಗೆ ಅಗಲೀಕರಿಸುವ ಕಾಮಗಾರಿಗೆ ಸಂಬಂಧಿಸಿದಂತೆ 59.60ಕಿ.ಮೀ. ರಿಂದ 73.100ರ ವರೆಗೆ ಸರಕಾರಿ / ಪಟ್ಟಾ ಸ್ಥಳದಲ್ಲಿ ಗುರುತಿಸಲಾದ 1177 ಮರಗಳ ತೆರವಿನ ಬಗ್ಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಮಂಗಳೂರು ಅವರು ಕೋರಿಕೊಂಡಿರುತ್ತಾರೆ.


ಸದ್ರಿ ಮರಗಳ ಕಡಿತಲೆಗೆ ಸಂಬಂಧಿಸಿದಂತೆ, ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳೊಳಗೆ ನಗರದ ನೆಹರೂ ಮೈದಾನದ ಬಳಿ ಇರುವ ಪಿ.ಡಬ್ಲ್ಯುಡಿ. ಕಟ್ಟಡದಲ್ಲಿರುವ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯನ್ನು ಸಂಪರ್ಕಿಸುವಂತೆ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಜೀವಹಾನಿ ತಡೆಗಟ್ಟಲು ಜಿಲ್ಲಾಡಳಿತ ಸನ್ನದ್ದ- ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

error: Content is protected !!
Scroll to Top