ಬೆಂಗಳೂರು ಬಂದ್‌ʼಗೆ ಅವಕಾಶವಿಲ್ಲ; ಇಂದು ಮಧ್ಯರಾತ್ರಿಯಿಂದಲೇ ನಗರದಲ್ಲಿ ನಿಷೇಧಾಜ್ಞೆ ಜಾರಿ- ಕಮಿಷನರ್ ಬಿ. ದಯಾನಂದ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 25. ನಾಳೆ (ಸೆ.26) ಕಾವೇರಿ ವಿಚಾರವಾಗಿ ಬೆಂಗಳೂರು ಬಂದ್‌ಗೆ ಅವಕಾಶವಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ತಿಳಿಸಿದ್ದಾರೆ.

ಪೊಲೀಸ್‌ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ನಾಳೆ ಬಂದ್ ಗೆ ಅವಕಾಶವಿಲ್ಲ, ಅನುಮತಿ ಕೊಡಲ್ಲ ಎಂದು ಸಂಘಟಕರಿಗೆ ಸೂಚಿಸಿದ್ದೇವೆ. ನಾಳೆ ಒತ್ತಾಯಪೂರ್ವಕ ಬಂದ್ ಮಾಡಿಸಿದಲ್ಲಿ ಕ್ರಮ ಖಚಿತ ಎಂದು ಎಚ್ಚರಿಸಿದರು. ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಸೆ. 25ರ ಮಧ್ಯರಾತ್ರಿಯಿಂದ 26ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಇರಲಿದೆ ಎಂದು ತಿಳಿಸಿದರು. 2016 ರಲ್ಲಿ ನಡೆದ ಘಟನೆ ಮತ್ತೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಬಸ್ ಗಳಿಗೆ ಭದ್ರತೆ ನೀಡುವುದರ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ. ತಮಿಳುನಾಡು ಬಸ್ ಗಳಿಗೂ ಭದ್ರತೆ ಬೇಕು ಅಂದ್ರೆ ಕೊಡುತ್ತೇವೆ ಎಂದು ಹೇಳಿದರು.

Also Read  ‘ಸೋಲು-ಗೆಲುವು ಹೊಸದೇನಲ್ಲ’ ಎಂದ ಮಾಜಿ ಸಿಎಂ.!➤ ಎಚ್​​ಡಿ ಕುಮಾರಸ್ವಾಮಿ

error: Content is protected !!
Scroll to Top