ಮಂಗಳೂರು: ರೈಲಿನಡಿಗೆ ತಲೆಯಿಟ್ಟು ವ್ಯಕ್ತಿ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಸೆ. 25. ವ್ಯಕ್ತಿಯೊಬ್ಬರು ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ರೈಲ್ವೇ ಗೇಟ್ ಬಳಿ ನಡೆದಿದೆ.


ಮೃತಪಟ್ಟ ವ್ಯಕ್ತಿಯನ್ನು ಮಂಗಳೂರು ನಗರದ ಕೊಂಚಾಡಿ ನಿವಾಸಿ ಪ್ರಶಾಂತ್ (44) ಎಂದು ಗುರುತಿಸಲಾಗಿದೆ. ಇವರು ಸೆ. 24 ರಂದು ಸಂಜೆ ಮನೆಯಿಂದ ಹೊರಟಿದ್ದು, ಇಂದು ಬೆಳಗ್ಗೆ ರೈಲ್ವೇ ಗೇಟ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಆಕ್ಟಿವಾ ಸ್ಕೂಟರನ್ನು ಉಳ್ಳಾಲದ ರೈಲ್ವೇ ನಿಲ್ದಾಣದಲ್ಲಿರಿಸಿ, ಉಚ್ಚಿಲ ರೈಲ್ವೇ ಗೇಟ್ ವರೆಗೆ ನಡೆದುಕೊಂಡು ಹೋಗಿ ರೈಲ್ವೇ ಹಳಿಯಲ್ಲಿ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅವಿವಾಹಿತರಾಗಿದ್ದ ಪ್ರಶಾಂತ್ ಅವರಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಅವರು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ವೈದ್ಯಕೀಯ ವರದಿಯಿಂದ ಲಭ್ಯವಾಗಿದೆ.

Also Read  ಉಡುಪಿ ಕೋರ್ಟ್ ನ ನ್ಯಾಯಾಧೀಶರಿಗೆ ಕೋವಿಡ್ ಸೋಂಕು ದೃಢ ➤ ಕೋರ್ಟ್ ಎರಡು ದಿನ ಸೀಲ್ ಡೌನ್

error: Content is protected !!
Scroll to Top