(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 25. ದ.ಕ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಸಂತ ಆಗ್ನೇಸ್ ಪದವಿ ಪೂರ್ವ ಕಾಲೇಜು ಮಂಗಳೂರು ಇದರ ಸಹಯೋಗದಲ್ಲಿ ಕಾಲೇಜಿನ ಒಳಾಂಗಣ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 67 ಕೆ.ಜಿ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸನಾ ಸುಲ್ತಾನ ಚಿನ್ನದ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಸಾಲೆತ್ತೂರು ನಿವಾಸಿ ಅಬ್ದುಲ್ ಬಶೀರ್ ಹಾಗೂ ಸೌದ ದಂಪತಿಗಳ ಪುತ್ರಿ. ನಿಸಾರುದ್ದೀನ್ ಸಾಲೆತ್ತೂರು ಮತ್ತು ಶರಣ್ಯ ದೇರಳಕಟ್ಟೆ ಇವರಿಂದ ತರಬೇತು ಪಡೆದಿದ್ದಾಳೆ.
ಮಹಿಳಾ ಕುಸ್ತಿ ಸ್ಪರ್ಧೆ – ಮೆಲ್ಕಾರ್ ಮಹಿಳಾ ಕಾಲೇಜಿನ ಸನಾ ಸುಲ್ತಾನಳಿಗೆ ಚಿನ್ನದ ಪದಕ
