ʻನಮ್ಮ ಮೆಟ್ರೋ’ದಲ್ಲಿ ಟಿಕೆಟ್‌ ರಹಿತ ಪ್ರಯಾಣ – ಯೂಟ್ಯೂಬರ್ ವಿರುದ್ಧ BMRCL ಕ್ರಮ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 25. ಮೆಟ್ರೋ ನಿಲ್ದಾಣದಲ್ಲಿ ಗೇಟ್ ಜಿಗಿದು ಟಿಕೆಟ್‌ರಹಿತ ಪ್ರಯಾಣ ಮಾಡಿರುವ ವೀಡಿಯೊ ಹಂಚಿಕೊಂಡ ಖ್ಯಾತ ಯೂಟ್ಯೂಬರ್ ಫಿಡಿಯಾಸ್ ಪನಾಯೊಟೌ ಅವರ ವಿರುದ್ಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ಖ್ಯಾತ ಯೂಟ್ಯೂಬರ್ ಫಿಡಿಯಾಸ್ ಪನಾಯೊಟೌ ಎಂಬಾತ ‘ಭಾರತದ ಮೆಟ್ರೋದೊಳಗೆ ನುಗ್ಗುವುದು ಹೇಗೆ’ ಎಂಬ ಶೀರ್ಷಿಕೆಯ ವಿಡಿಯೋವನ್ನು ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅದು ತೀವ್ರ ಟೀಕೆಗೆ ಗುರಿಯಾಗಿದೆ. ಅಲ್ಲದೇ ಆತ ಟಿಕೆಟ್‌ ರಹಿತ ಪ್ರಯಾಣ ಮಾಡಿ ಬೇರೆಯವರಿಗೂ ಪ್ರಚೋದನೆ ಮಾಡಿದ್ದಾನೆ. ಭಾರತದಲ್ಲಿ ಏನೂ ಮಾಡಿದರೂ ನಡೆಯುತ್ತೆ ಎನ್ನುವ ಇಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕುʼʼ ಎಂದು ಹಲವರು ಬಿಎಂಆರ್‌ಸಿಎಲ್‌ ಮತ್ತು ಪೊಲೀಸ್‌ ಇಲಾಖೆಯನ್ನು ಟ್ಯಾಗ್‌ ಮಾಡಿದ್ದಾರೆ. ಖ್ಯಾತ ಉದ್ಯಮಿ, ಬಿಲಿಯನೇರ್ ಎಲಾನ್ ಮಸ್ಕ್ ಅವರನ್ನು ಅಪ್ಪಿಕೊಳ್ಳುವ ಮೂಲಕ ಪ್ರಸಿದ್ಧಿಗೆ ಬಂದಿದ್ದ ಫಿಡಿಯಾಸ್, ತಮ್ಮನ್ನು ‘ವೃತ್ತಿಪರ ತಪ್ಪು ಎಸಗುವವ’ ಎಂದು ಕರೆದುಕೊಂಡಿದ್ದಾರೆ. ಅವರು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 2.26 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ.

Also Read  ಬಂಧನದ ಭೀತಿ ಆಸ್ಪತ್ರೆಗೆ ದಾಖಲಾದ ಇನ್ಸ್​​ಪೆಕ್ಟರ್ ಪ್ರವೀಣ್..! 

error: Content is protected !!
Scroll to Top