ಬೆಂಗಳೂರು ಬಂದ್‌ ಗೆ ಬೆಂಬಲವಿಲ್ಲ, ಸೆ. 29ಕ್ಕೆ ‘ಕರ್ನಾಟಕ ಬಂದ್ʼ – ವಾಟಾಳ್ ನಾಗರಾಜ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.25. ಸೆಪ್ಟೆಂಬರ್ 29ರಂದು ʼಅಖಂಡ ಕರ್ನಾಟಕ ಬಂದ್ʼ ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.

ಈ ಕುರಿತು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕನ್ನಡ ಒಕ್ಕೂಟ ಸಂಘಟನೆಗಳು ಕರ್ನಾಟಕ ಬಂದ್ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡಿತು. “ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ಚಾಲಕರು ಎರಡು ದಿನ ಬಂದ್ ಮಾಡುವ ಪರಿಸ್ಥಿತಿಯಲ್ಲಿಲ್ಲ. ಎರಡು ದಿನ ದುಡಿಮೆ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂಬ ಕೂಗು ನಮ್ಮ ಸಂಘಟನೆಗಳ ಚಾಲಕರಿಂದ ಕೇಳಿಬರುತ್ತಿವೆ. ಹಾಗಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ 29 ನೇ ತಾರೀಖಿನ ಕರ್ನಾಟಕ ಬಂದ್ ಗೆ ಮಾತ್ರ ನಮ್ಮ ಬೆಂಬಲ ಎಂಬುವುದಾಗಿ ವಾಟಾಳ್ ನಾಗರಾಜ್ ತಿಳಿಸಿದರು.

Also Read  ಕಡಬದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಅವಲೋಕನ ಸಭೆ- ಉಭಯ ಬಣಗಳ ಮಧ್ಯೆ ಹಲ್ಲೆ, ಮಾರಾಮಾರಿ

ನಾಳೆಯ ಬೆಂಗಳೂರು ಬಂದ್ ಗೆ ಯಾವುದೇ ಸಭೆ ಕರೆಯದೆ ಏಕಾಏಕಿ ಕರೆ ಕೊಟ್ಟಿದ್ದಾರೆ. ನಾವು ಇಂದಿನ ಸಭೆಯಲ್ಲಿ ಅತ್ಯಂತ ಚಿಂತನೆ ಮಾಡಿ ಅಖಂಡ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದೇವೆ ಎಂದು ಹೇಳಿದರು. ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ‘ಕರ್ನಾಟಕ ಬಂದ್ ಗೆ ನಮ್ಮ ಒಮ್ಮತ ಇದೆ. ಸೆ. 26ಕ್ಕೆ ಕೆಲವರು ಬಂದ್ ಮಾಡ್ತಿದ್ದಾರೆ. ರೈತ‌ ಸಂಘಕ್ಕೆ ಬೆಂಬಲಿಸುವಂತೆ ವಿನಂತಿಮಾಡಿದ್ದರು, ನಾವು ಒಂದೇ ಬಂದ್ ಆಗಬೇಕು ಎಂದಿದ್ದೇವೆ, ನಾಳೆಯ ಬೆಂಗಳೂರು ಬಂದ್ ಗೆ ನಮ್ಮ ಬೆಂಬಲವಿಲ್ಲ’ ಎಂದು ಸ್ಪಷ್ಟಪಡಿಸಿದರು.

error: Content is protected !!
Scroll to Top