ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಪರಾರಿಯಾಗಿದ್ದ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಬೀದರ್, ಸೆ. 25. ಇಲ್ಲಿನ ಬಸವಕಲ್ಯಾಣ ತಾಲೂಕಿನ ಧನ್ನೂರಾ ಗ್ರಾಮದಲ್ಲಿ ಮಸೀದಿಯೊಂದರ ಮೇಲೆ ಕೇಸರಿ ಧ್ವಜ ಅಳವಡಿಸಿ ನಾಪತ್ತೆಯಾಗಿದ್ದ ನಾಲ್ವರು ಕಿಡಿಗೇಡಿಗಳನ್ನು ಬಸವಕಲ್ಯಾಣ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ.

ಬಂಧಿತರನ್ನು ಧನ್ನೂರಾ ಗ್ರಾಮದ ಅಭಿಷೇಕ್, ಕಲ್ಯಾಣಿ, ಸುಶೀಲ್ ಹಾಗೂ ವೀರೇಶ್ ಬಿರಾದಾರ ಎಂದು ಪೊಲೀಸರು ಗುರುತಿಸಲಾಗಿದೆ. ಆರೋಪಿಗಳು ಸೆ. 21ರಂದು ಬಸವಕಲ್ಯಾಣ ತಾಲೂಕಿನ ಧನ್ನೂರ (ಕೆ) ಗ್ರಾಮದ ಹೊರವಲಯದ ಜಾಮಿಯಾ ಮಸೀದಿ ಮೇಲೆ ತಡರಾತ್ರಿ ಭಾಗವಾಧ್ವಜ ಹಾರಿಸಿ ಗ್ರಾಮದಲ್ಲಿ ಅಶಾಂತಿ ವಾತಾವರಣ ಉಂಟು ಮಾಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಬಸವಕಲ್ಯಾಣ ಗ್ರಾಮೀಣ ಪೊಲೀಸರು ಗ್ರಾಮಸ್ಥರ ಮನವೊಲಿಸಿ ಕೇಸರಿ ಧ್ವಜ ತೆಗೆಸುವಲ್ಲಿ ಯಶಸ್ವಿಯಾಗಿದ್ದರು. ಈ ಸಂಬಂಧ ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Also Read  ಅಕ್ರಮ ಬಾಂಗ್ಲಾ ವಲಸಿಗರ ನ್ಯಾಯಾಂಗ ಬಂಧನ- 14 ದಿನ ಅವಧಿ ವಿಸ್ತರಣೆ

error: Content is protected !!
Scroll to Top