ಎಟಿಎಂ ಅಪ್ಡೇಟ್ ಹೆಸರಿನಲ್ಲಿ ಸಂದೇಶ ಕಳುಹಿಸಿ ವಂಚನೆ- ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಾಪು, ಸೆ. 25. ಬ್ಯಾಂಕ್‍ನ ಎಟಿಎಂ ಅಪ್ಡೇಟ್ ಮಾಡಿಕೊಡುವುದಾಗಿ ಬಂದ ಮಸೇಜ್‍ನಿಂದ ಮಹಿಳೆಯೋರ್ವರು 3.38 ಲಕ್ಷ ರೂ. ಕಳೆದುಕೊಂಡ ಘಟನೆಯ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು ಶಂಕರಪುರದ ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದು, ಸೆಪ್ಟೆಂಬರ್ 23ರಂದು (9387666481) ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಹೆಂಡತಿಯ ಮೊಬೈಲ್ ಗೆ ತಾನು ಬ್ಯಾಂಕ್ ಉದ್ಯೋಗಿಯಾದ್ದು, ನಿಮ್ಮ ಖಾತೆಯ ಎಟಿಎಂ ಅಪ್ಡೇಟ್ ಮಾಡಿಕೊಳ್ಳುವಂತೆ ಮೆಸೇಜ್ ಬಂದಿತ್ತು. ಅದರಂತೆ ಹೆಂಡತಿಯು ಪಾಸ್ ಬುಕ್ ವಿವರವನ್ನು ನೀಡಿದ್ದರು. ಬಳಿಕ ಆ ವ್ಯಕ್ತಿಯು ಅಕೌಂಟ್‍ಗೆ ನಾಮಿನಿಯಾಗಿರುವ ಖಾತೆದಾರರ ವಿವರವನ್ನು ಕೂಡಾ ಅಪ್ಡೇಟ್ ಮಾಡಲು ಇದೆ ವಿವರವನ್ನು ಒದಗಿಸುವಂತೆ  ತಿಳಿಸಿದ್ದರು. ಅದರಂತೆ ದೂರುದಾರರ ಎಟಿಎಂ ಕಾರ್ಡ್ ವಿವರವನ್ನುನೀಡಿದ್ದರು. ಸ್ವಲ್ಪ ಸಮಯದ ನಂತರ ಮೊಬೈಲ್‍ಗೆ ಬಂದಿರುವ ಒಟಿಪಿ ವಿವರವನ್ನು ಅಪರಿಚಿತ ವ್ಯಕ್ತಿಗೆ ನೀಡಿದ್ದರು. ಆ ಬಳಿಕ ಅವರ ಅಕೌಂಟ್‍ನಿಂದ 1,99,999/-, 50,000/-, 80,000/- 8200/- ಒಟ್ಟು 3,38,199/- ರೂಪಾಯಿ ಹಣ ಕಡಿತವಾಗಿದೆ. ಆರೋಪಿತನು ಮೋಸದಿಂದ ಬ್ಯಾಂಕ್ ಖಾತೆಯ ವಿವರವನ್ನು ಪಡೆದುಕೊಂಡು ಅಕೌಂಟ್‍ನಲ್ಲಿದ್ದ ಒಟ್ಟು 3,38,199/- ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Also Read  ಎಸ್ಡಿಪಿಐ ನಾವೂರು ಗ್ರಾಮ ಪಂಚಾಯತ್ ಚುನಾವಣೆಯ ಅಭ್ಯರ್ಥಿ ಘೋಷಣೆ ಮತ್ತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ

error: Content is protected !!
Scroll to Top