ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯಲ್ಲಿ ಹಲವು ಉದ್ಯೋಗಗಳು; ಸೆ. 26ರಂದು ಬೆಂಗಳೂರಿನಲ್ಲಿ ಸಂದರ್ಶನ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24. ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯಲ್ಲಿ (NIANP) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬಹುದು. ಆಸಕ್ತರು ಸೆಪ್ಟಂಬರ್ 26 ರೊಳಗೆ ಅರ್ಜಿ ಸಲ್ಲಿಸಬೇಕು. ಅಂದರೆ ಸೆಪ್ಟಂಬರ್ 26ರಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು. ಸಂದರ್ಶನದಲ್ಲಿ ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ:-

ಸಂಸ್ಥೆಯ ಹೆಸರು: ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯ ವಿಜ್ಞಾನ ಸಂಸ್ಥೆ

ಹುದ್ದೆ ಹೆಸರು: ಯಂಗ್ ಪ್ರೊಫೆಶನಲ್-I

ಖಾಲಿ ಹುದ್ದೆ ಸಂಖ್ಯೆ: 2

ಶೈಕ್ಷಣಿಕ ಅರ್ಹತೆ: ಪದವಿ

Also Read  ಉಚಿತ ಕಾನೂನು ತರಬೇತಿ

ಮಾಸಿಕ ವೇತನ: 25,000 ರೂಪಾಯಿ

ಸಂದರ್ಶನ ದಿನ: ಸೆಪ್ಟೆಂಬರ್ 26

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು. ಇದರೊಂದಿಗೆ ಲ್ಯಾಬೊರೇಟರಿಯಲ್ಲಿ ರಿಸರ್ಚ್​ ಅನುಭವ ಪಡೆದಿರಬೇಕು. ಇನ್ನೂ ಸಂದರ್ಶನದಲ್ಲಿ ಆಯ್ಕೆ ಆಗುವವರಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ನೀಡಿ ಮಾಸಿಕ 25,000 ರೂ. ವೇತನ ನೀಡಲಾಗುವುದು ಎಂದು ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯ ವಿಜ್ಞಾನ ಸಂಸ್ಥೆ ಹೇಳಿದೆ. ಅಭ್ಯರ್ಥಿಗಳ ವಯೋಮಿತಿ ನೋಡುವುದಾದರೆ, ಇದೇ ಸೆಪ್ಟೆಂಬರ್ 26ಕ್ಕೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 45 ವರ್ಷ ಇರಬೇಕು ಎಂದು ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳಿಗೆ ಮೀಸಲಾತಿ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುವುದು. ನಂತರ ಸೆಪ್ಟಂಬರ್ 26ರಂದು ಸಂದರ್ಶನ ಮೂಲಕ ಸಂಸ್ಥೆ ಆಯ್ಕೆ ಮಾಡಿಕೊಳ್ಳಲಿದೆ. ಸಮಿತಿ ಕೊಠಡಿ, ಆಡಳಿತಾತ್ಮಕ ಬ್ಲಾಕ್, ICAR-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ನ್ಯೂಟ್ರಿಷನ್ & ಫಿಸಿಯಾಲಜಿ ಆಡುಗೋಡಿ, ಬೆಂಗಳೂರು-560030 ಇಲ್ಲಿ ಸಂದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಮಂಜೇಶ್ವರ: ಬೇಕರಿ ಹಾಗೂ ಹೊಟೆಲ್ ನುಗ್ಗಿ ಕಳ್ಳತನಕ್ಕೆ ಯತ್ನ ➤ ಸಿಸಿಟಿವಿಯಲ್ಲಿ ದೃಶ್ಯ ಸೆರೆ

error: Content is protected !!
Scroll to Top