ಆನ್ ಲೈನ್ ವಂಚನೆ- ಸುಮಾರು 99 ಲಕ್ಷ ರೂ.ಕಳೆದುಕೊಂಡ ಇಂಜಿನಿಯರ್

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಸೆ. 24. ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು ಕಳುಹಿಸಿದ ಲಿಂಕ್ ಕ್ಲಿಕ್ ಮಾಡುವ ಮೂಲಕ ಸಾಫ್ಟ್‌ ವೇರ್ ಇಂಜಿನಿಯರ್ ಓರ್ವರು ಬರೋಬ್ಬರಿ 99 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ಶಿವಮೊಗ್ಗದಿಂದ ವರದಿಯಾಗಿದೆ.

ಶಿವಮೊಗ್ಗದ ಸಾಫ್ಟ್‌ ವೇರ್ ಇಂಜಿನಿಯರ್ ಓರ್ವರಿಗೆ ಮ್ಯಾಟ್ರಿಮೋನಿ ವೆಬ್‌ಸೈಟ್‌ ನಲ್ಲಿ ಸ್ವಪ್ನಾ ಎಂಬ ಹೆಸರಿನ ಯುವತಿಯ ಪರಿಚಯವಾಗಿದ್ದು, ಇಬ್ಬರು ವಾಟ್ಸಪ್ ಮೂಲಕ ಚಾಟಿಂಗ್ ಮಾಡಿದ್ದಾರೆ. ಸ್ವಪ್ನಾ ತಾನು ಲಂಡನ್‌ನಲ್ಲಿ ವಾಸವಾಗಿದ್ದು, ತನ್ನ ಚಿಕ್ಕಪ್ಪ ವಾಲ್‌ ಸ್ಟ್ರೀಟ್‌ನಲ್ಲಿ ಮಾರ್ಕೆಟ್ ಅನಾಲಿಸ್ಟ್ ಎಂದು ತಿಳಿಸಿದ್ದಳು. ಚಿಕ್ಕಪ್ಪನ ಮಾರ್ಗದರ್ಶನದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ನಂಬಿಸಿ, ಒಂದು ಲಿಂಕ್ ಕಳುಹಿಸಿದ್ದಳು. ಅದರಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿ, ಕಸ್ಟಮರ್ ಸಪೋರ್ಟ್ ನಂಬರ್ ಎಂದು ದೂರವಾಣಿ ಸಂಖ್ಯೆಯೊಂದನ್ನು ನೀಡಿದ್ದಳು. ಅದರಂತೆ ದೂರುದಾರರು ಕಸ್ಟಮರ್ ಸಪೋರ್ಟ್ ನಂಬರ್‌ಗೆ ವಿಚಾರಿಸಿದಾಗ ಅಪರಿಚಿತ ವ್ಯಕ್ತಿಯು ಹಣ ಹೂಡಿಕೆ ಕುರಿತು ತಿಳಿಸಿದ್ದ. ಅದರಂತೆ ಇಂಜಿನಿಯರ್, ವಿವಿಧ ಬ್ಯಾಂಕ್ ಖಾತೆಯಿಂದ 99,03,000 ರೂ. ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ತರಬೇತಿ ವೇಳೆ ಲಘು ವಿಮಾನ ಗರ್ಭಗುಡಿಗೆ ಢಿಕ್ಕಿ..!!

error: Content is protected !!
Scroll to Top