(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 24. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳವಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಇಂಡಿಗೊ ಮತ್ತು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗಳು ನೇರವಾಗಿ ಸಂಪರ್ಕಿಸುವ ದೇಶೀಯ ತಾಣಗಳಲ್ಲಿ ಶೇ. 87.5 ಪ್ರಯಾಣಿಕರ ಹೆಚ್ಚಳ ಹಾಗೂ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮತ್ತು ಇಂಡಿಗೊ ವಿಮಾನಯಾನ ಸಂಸ್ಥೆಗಳು ಸಂಚರಿಸುವ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಶೇ. 81.7 ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.
ಬೆಂಗಳೂರು, ಚೆನ್ನೈ, ದಿಲ್ಲಿ, ಹೈದರಾಬಾದ್, ಮುಂಬಯಿ ಮತ್ತು ಪುಣೆಯಿಂದ ಮಂಗಳೂರಿಗೆ ಬರುವ ವಿಮಾನಗಳಲ್ಲಿ 3,21,554 ಆಸನ ಸಾಮರ್ಥ್ಯದ ಇಂಡಿಗೊ ಮತ್ತು ಏರ್ ಇಂಡಿಯಾ ವಿಮಾನದಲ್ಲಿ 2,80,739 ಪ್ರಯಾಣಿಕರು ಸಂಚರಿಸಿದ್ದು, ಶೇ.87.5 ಸಾಧನೆ ಮಾಡಿದೆ. ಮುಂಬಯಿಯಿಂದ ಆಗಮಿಸಿದವರ ಸಂಖ್ಯೆ ಶೇ.91.5 ಆಗಿದ್ದು, 1,23,836 ಆಸನ ಸಾಮರ್ಥ್ಯದಲ್ಲಿ1,12,973 ಮಂದಿ ಪ್ರಯಾಣಿಸಿದ್ದಾರೆ. ಪುಣೆಯ 16,062 ಸೀಟುಗಳ ಪೈಕಿ 11,078 ಪ್ರಯಾಣಿಕರು ಶೇ. 69ರಷ್ಟು ಸಂಚರಿಸಿದ್ದಾರೆ. ಮಂಗಳೂರಿನಿಂದ ಹೊರಡುವ ದೇಶೀಯ ವಿಮಾನಗಳಲ್ಲಿ ಚೆನ್ನೈ ಮತ್ತು ಹೈದರಾಬಾದ್ ಕ್ರಮವಾಗಿ ಶೇ.89.91 ಮತ್ತು ಶೇ.89.66ರಷ್ಟು ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.