(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 24. ಕೆವೈಸಿ ಮಾಡದಿದ್ದಲ್ಲಿ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗುತ್ತದೆ ಎಂದು ನಂಬಿಸಿ ಅಪರಿಚಿತ ವ್ಯಕ್ತಿಯೊಬ್ಬ 1,93,210 ರೂ. ಹಣವನ್ನು ಬ್ಯಾಂಕ್ ಖಾತೆಯಿಂದ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ವರದಿಯಾಗಿದೆ.
ದೂರಿನ ಪ್ರಕಾರ, ದೂರುದಾರರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕೆವೈಸಿ ಅಪ್‌ಡೇಟ್ ಮಾಡುವ ಕುರಿತಂತೆ ಸಂದೇಶ ಬಂದಿದೆ. ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಅಪ್ ಡೇಟ್ ಮಾಡದಿದ್ದರೆ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗುತ್ತದೆ ಎಂದು ತಿಳಿಸಿದ್ದ ಎನ್ನಲಾಗಿದೆ. ಇದನ್ನು ನಂಬಿದ ದೂರುದಾರರು ಸಂದೇಶದಲ್ಲಿ ಬಂದಿದ್ದ ಲಿಂಕ್ ಮೂಲಕ ಕ್ರೆಡಿಟ್ ಕಾರ್ಡ್ ನಂಬರ್ ನಮೂದಿಸಿ, ಒಟಿಪಿ ನೀಡಿದ್ದಾರೆ. ತಕ್ಷಣವೇ ಅವರ ಖಾತೆಯಿಂದ ಹಂತ ಹಂತವಾಗಿ 1.93 ಲಕ್ಷ ರೂ. ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Also Read ಸುಳ್ಯದ ಕೆದಂಬಾಡಿ, ಅರಂಬೂರು, ಅರಂತೋಡಿನಲ್ಲಿ ಮತ್ತೆ ಭೂಕಂಪನ ➤ ಬೆಳಗ್ಗೆ 10:45ರ ವೇಳೆಗೆ ಕಂಪಿಸಿದ ಭೂಮಿ