389 ಹೊಸ MSIL ಮಳಿಗೆಗೆ ಲೈಸೆನ್ಸ್ ನೀಡಲು ಮುಂದಾದ ಅಬಕಾರಿ ಇಲಾಖೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ರಾಜ್ಯದಲ್ಲಿ ಹಣಕಾಸು ಖಜಾನೆಗೆ ಹೆಚ್ಚು ತೆರಿಗೆ ಬರುವಂತಾಗಲು ಹೊಸದಾಗಿ ಆರಂಭಿಸುವ ಮದ್ಯ ಮಾರಾಟ ಮಳಿಗೆಗಳಿಗೆ ಲೈಸೆನ್ಸ್ ವಿತರಿಸಲು ಅಬಕಾರಿ ಇಲಾಖೆಯಲ್ಲಿ ಪ್ರಸ್ತಾವನೆ ಸಿದ್ಧಗೊಂಡಿದ್ದು, ಒಟ್ಟು 389 ಎಂಎಸ್‍ಐಎಲ್ ಮದ್ಯ ಮಾರಾಟ ಮಳಿಗೆ ತೆರೆಯಲು ಅವಕಾಶ ನೀಡಲು ಚಿಂತನೆ ನಡೆಸಲಾಗಿದೆ.

3 ಸಾವಿರಕ್ಕಿಂತ ಹೆಚ್ಚನ ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ತೆರೆಯಲು ಪರವಾನಗಿ ಹಾಗೂ ಸೂಪರ್ ಮಾರುಕಟ್ಟೆಗಳಲ್ಲೂ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 12,593 ವಿವಿಧ ಪರವಾನಗಿಗಳ ಮದ್ಯ ಮಾರಾಟ ಮಳಿಗೆಗಳಿದ್ದು ಇದೀಗ ಹೊಸದಾಗಿ 389 ಎಂಎಸ್‍ಐಎಲ್ (ಸಿಎಲ್-11ಸಿ) ಮಳಿಗೆ ತೆರೆಯಲು ಅನುಮತಿ ಕೋರಲಾಗಿದೆ. ಇದರಲ್ಲಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ 91, ಬೆಳಗಾವಿ 20, ಕಲಬುರಗಿ 20, ಹೊಸಪೇಟೆ 22, ಮಂಗಳೂರು 51, ಮೈಸೂರು ನಗರದಲ್ಲಿ 43 ಪರವಾನಗಿ ನೀಡಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ.

Also Read  10 ವರ್ಷಗಳ ಹಿಂದೆ ಮಾಡಿಸಿದ ʻಆಧಾರ್ ಕಾರ್ಡ್ʼ ಅಪ್ಡೇಟ್ ಕಡ್ಡಾಯ

error: Content is protected !!
Scroll to Top