ಅಕ್ಟೋಬರ್ ನಲ್ಲಿ ಸಂಭವಿಸಲಿದೆ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ಅಕ್ಟೋಬರ್‌ ತಿಂಗಳಿನಲ್ಲಿ ಸೌರ ಗ್ರಹಣ ಮತ್ತು ಚಂದ್ರ ಗ್ರಹಣಗಳು ಸಂಭವಿಸಲಿದೆ. ಈ ವರ್ಷದಲ್ಲಿ ಒಟ್ಟು 4 ಗ್ರಹಣವಿದ್ದು ಮೊದಲ ಸೂರ್ಯಗ್ರಹಣ ಏಪ್ರಿಲ್ 20 ರಂದು ಸಂಭವಿಸಿತು, ನಂತರ ಎರಡನೇ ಚಂದ್ರಗ್ರಹಣವು ಮೇ 5 ರಂದು ಸಂಭವಿಸಿತು. ಈಗ ಉಳಿದ ಎರಡು ಗ್ರಹಣಗಳು ಅಕ್ಟೋಬರ್ ತಿಂಗಳಿನಲ್ಲಿ ಸಂಭವಿಸಲಿದೆ.

ಬರುವ ಅ. 14 ರಂದು ವೃತ್ತಾಕಾರದ ಸೂರ್ಯಗ್ರಹಣವಾಗಿದ್ದು, ಭಾರತದಲ್ಲಿ ಗೋಚರಿಸುವುದಿಲ್ಲ. ಟೆಕ್ಸಾಸ್, ಮೆಕ್ಸಿಕೊ, ಮಧ್ಯ ಅಮೆರಿಕ, ಕೊಲಂಬಿಯಾ ಹಾಗೂ ಬ್ರೆಜಿಲ್‍ನ ಕೆಲವು ಭಾಗಗಳಲ್ಲಿ, ಅಲಾಸ್ಕಾ ಮತ್ತು ಅರ್ಜೆಂಟೀನಾದಲ್ಲಿ ಗ್ರಹಣ ಗೋಚರಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Also Read  ತಿರುವನಂತಪುರ - ಕಾಸರಗೋಡು ವಂದೇ ಭಾರತ್ ಎಕ್ಸ್‌ ಪ್ರೆಸ್ ರೈಲು ಮಂಗಳೂರಿಗೆ ವಿಸ್ತರಣೆ

ನಂತರದ ಚಂದ್ರಗ್ರಹಣ ಅಕ್ಟೋಬರ್ 28ರ ರಾತ್ರಿ ಸಂಭವಿಸಲಿದ್ದು, ಈ ಗ್ರಹಣವು ಭಾರತದ ಕೆಲವು ಭಾಗಗಳಲ್ಲಿ ಶರದ್ ಪೂರ್ಣಿಮೆಯ ಸಮಯದಲ್ಲಿ ಗೋಚರಿಸುತ್ತದೆ. ಇದು ಭಾಗಶಃ ಚಂದ್ರಗ್ರಹಣವಾಗಿದ್ದು, ಭಾರತವನ್ನು ಹೊರತುಪಡಿಸಿ, ಯುರೋಪ್, ಆಸ್ಟ್ರೇಲಿಯಾ, ಉತ್ತರ-ದಕ್ಷಿಣ ಆಫ್ರಿಕಾ, ಆಕ್ರ್ಟಿಕ್, ಅಂಟಾರ್ಟಿಕಾ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಏಷ್ಯಾ ಸೇರಿದಂತೆ ಹಿಂದೂ ಮಹಾಸಾಗರದ ಹಲವು ಭಾಗಗಳಲ್ಲಿ ಇದು ಗೋಚರಿಸುತ್ತದೆ.

error: Content is protected !!
Scroll to Top