ಕನ್ನಡ ಬಿಗ್ ಬಾಸ್ ಸೀಸನ್- 10 ಪ್ರಸಾರಕ್ಕೆ ಕೊನೆಗೂ ಮುಹೂರ್ತ ಫಿಕ್ಸ್..! – ಯಾವಾಗ ಅಂತೀರಾ…? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ದೇಶದಲ್ಲಿ ಯಶಸ್ಸನ್ನು ಸಾಧಿಸಿದ ಬಿಗ್ ಬಾಸ್ ರಿಯಾಲಿಟಿ ಶೋ ಬಹುಬಾಷೆಯಲ್ಲಿಯೂ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಕನ್ನಡದ ಕಿರುತೆರೆ ಪ್ರೇಕ್ಷಕರು ಕಳೆದ 9 ಸೀಸನ್‌ಗಳಿಗೂ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಇದೇ ಭರವಸೆಯೊಂದಿಗೆ ಮತ್ತೊಂದು ಸೀಸನ್‌ ಪ್ರಾರಂಭವಾಗುತ್ತಿದ್ದು, ಅಕ್ಟೋಬರ್ 8 ರಿಂದ ಭರ್ಜರಿಯಾಗಿ “ಬಿಗ್ ಬಾಸ್ ಕನ್ನಡ ಸೀಸನ್ 10” ಆಂಭವಾಗಲಿದೆ.

ಸದ್ಯಕ್ಕೆ ಸೀಸನ್ 10ರ ಪ್ರೋಮೊ ಪ್ರಸಾರವಾಗುತ್ತಿದ್ದು, ರಿಯಾಲಿಟಿ ಶೋ ಆರಂಭವಾಗುವ ದಿನವನ್ನು ರಿವೀಲ್‌ ಮಾಡಲಾಗಿದೆ. ಇನ್ನು ಎಂದಿನಂತೆ ಈ ಜನಪ್ರಿಯ ರಿಯಾಲಿಟಿ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದ್ದು, ಪ್ರಸಾರದ ದಿನಾಂಕವನ್ನು ಪ್ರೋಮೊದಲ್ಲಿ ಬಿಡುಗಡೆ ಮಾಡಲಾಗಿದೆ. ಇದೀಗ ಈ ಜನಪ್ರಿಯ ರಿಯಾಲಿಟಿ ಶೋ ಅಧಿಕೃತವಾಗಿ ಅಕ್ಟೋಬರ್ 8ರಂದು ಪ್ರಸಾರವಾಗಲಿದೆ ಎಂದು ಘೋಷಿಸಲಾಗಿದೆ. ಅಕ್ಟೋಬರ್ 8ರಂದು ಬಿಗ್ ಬಾಸ್ ಸೀಸನ್ 10 ಅದ್ಧೂರಿ ಚಾಲನೆ ಸಿಗಲಿದ್ದು, ಎರಡು ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳನ್ನು ಕಳುಹಿಸಿಕೊಡಲಾಗುತ್ತದೆ. ಸುಮಾರು 17 ಸ್ಪರ್ಧಿಗಳು ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Also Read  ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಏ. 29 ರಿಂದಲೇ ಆರಂಭ..!

error: Content is protected !!
Scroll to Top