ಟ್ರಕ್ ನಲ್ಲಿ 12 ಕೋ.ರೂ. ಮೌಲ್ಯದ ಮಾದಕ ವಸ್ತು ಸಾಗಾಟ – ಬಿಎಸ್‌ಎಫ್‌ನಿಂದ ಭರ್ಜರಿ ಬೇಟೆ

(ನ್ಯೂಸ್ ಕಡಬ) newskadaba.com ಕೋಲ್ಕತಾ, ಸೆ. 22. ಪಶ್ಚಿಮಬಂಗಾಳದ ದಕ್ಷಿಣ ದಿನಜ್‌ಪುರ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್‌ಎಫ್ ಅಧಿಕಾರಿಗಳು ಟ್ರಕ್ ನಲ್ಲಿದ್ದ 12 ಕೋ. ರೂ.ಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಕುರಿತು ವರದಿಯಾಗಿದೆ. ಖಚಿತ ಮಾಹಿತಿ ದೊರೆತ ಹಿನ್ನೆಲೆ ಗಡಿ ಭದ್ರತಾ ಪಡೆಯ ಬೆಟಾಲಿಯನ್‌ಗಳು ಹಾಗೂ ಕಸ್ಟಮ್ ಅಧಿಕಾರಿಗಳು ಜಂಟಿಯಾಗಿ, ನಿಲ್ಲಿಸಿದ್ದ ಟ್ರಕ್‌ ನಲ್ಲಿ ಕಾರ್ಯಾಚರಣೆ ನಡೆಸಿದವು.

ಕಾರ್ಯಾಚರಣೆಯ ವೇಳೆ ಟ್ರಕ್ ಚಾಲಕನ ಕ್ಯಾಬಿನ್‌ನಲ್ಲಿ ಪ್ಲಾಸ್ಟಿಕ್ ನ ಕಪ್ಪು ಕೈ ಚೀಲವೊಂದು ಪತ್ತೆಯಾಗಿದ್ದು, ಈ ಚೀಲದಲ್ಲಿ 49 ಲಕ್ಷ ರೂ. ಮೌಲ್ಯದ ಯಾಬಾ ಮಾತ್ರೆಗಳು, 11 ಕೋ.ರೂ.ಗೂ ಅಧಿಕ ಮೌಲ್ಯದ 321 ಗ್ರಾಂ. ಹೆರಾಯಿನ್ ಪತ್ತೆಯಾಗಿದೆ ಎನ್ನಲಾಗಿದೆ. ಈ ಮಾದಕ ವಸ್ತುಗಳನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಸಾಗಾಟ ಮಾಡಲು ಟ್ರಕ್‌ನ ಒಳಗೆ ಇರಿಸಲಾಗಿತ್ತು. ಟ್ರಕ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Also Read  ಕಳ್ಳತನಗೈಯ್ಯಲು ಡಯೆಟ್ ಮಾಡಿ ತೂಕ ಇಳಿಸಿದ ಖತರ್ನಾಕ್ ಕಳ್ಳ..! ➤ ಉಂಡ ಮನೆಗೆ ಕನ್ನ ಹಾಕಿದ

error: Content is protected !!
Scroll to Top