ಎನ್‌ಡಿಎಗೆ ಜೆಡಿಎಸ್ ಸೇರ್ಪಡೆ – ಪಕ್ಷದ ವಕ್ತಾರೆ ಹುದ್ದೆಗೆ ಯು.ಟಿ. ಆಯಿಶ ಫರ್ಝಾನ ರಾಜೀನಾಮೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 22. ಎನ್.ಡಿಎ ಗೆ ಜೆಡಿಎಸ್ ಸೇರ್ಪಡೆ ಬೆನ್ನಲ್ಲೇ ಜಾತ್ಯಾತೀತ ಜನತಾದಳದ (JDS) ರಾಜ್ಯ ವಕ್ತಾರೆ ಹುದ್ದೆಗೆ ಯು.ಟಿ.ಆಯಿಶ ಫರ್ಝಾನ ಅವರು ಶುಕ್ರವಾರದಂದು ರಾಜೀನಾಮೆ ಸಲ್ಲಿಸಿದ್ದಾರೆ.

ಈ ಕುರಿತು ಜೆಡಿಎಸ್‌ ನ ಮಾಧ್ಯಮ ಮುಖ್ಯಸ್ಥರಾಗಿರುವ ಶ್ರೀಕಂಠೇಗೌಡ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಅವರು, “ಕನ್ನಡ ನಾಡಿನ ಸಮೃದ್ಧಿ ಮತ್ತು ಜಾತ್ಯಾತೀತ ನಿಲುವುಗಳು ನನ್ನ ಜೀವನದ ಪ್ರಧಾನ ಆಶಯಗಳಾಗಿದ್ದು ಆ ನಿಟ್ಟಿನಲ್ಲಿ ಶ್ರಮಿಸುವ ಸಲುವಾಗಿ ನಾನು ತಮ್ಮ ಪಕ್ಷವನ್ನು ಸೇರಿದ್ದೆ. ಆದರೆ ಬದಲಾದ ಕಾಲಘಟ್ಟದಲ್ಲಿ ನನ್ನ ನಿಲುವುಗಳು ಮತ್ತು ಪಕ್ಷದ ನಿಲುವುಗಳಲ್ಲಿ ಹೊಂದಾಣಿಕೆಯಾಗದ ಕಾರಣ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಜೆಡಿಎಸ್ ಪಕ್ಷ ನೀಡಿದ್ದ ರಾಜ್ಯ ವಕ್ತಾರೆ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆʼʼ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Also Read  ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ➤ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

error: Content is protected !!
Scroll to Top