ಸ್ಪಾಟಿಕ್ ಮೀಟರ್ ಗೆ ಮುಂದಾದ ಮೆಸ್ಕಾಂ…! – 4.68 ಲಕ್ಷ ಮೀಟರ್ ಬದಲಾವಣೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 22. ಹಲವಾರು ವರ್ಷಗಳ ಹಿಂದಿನ ವಿದ್ಯುತ್‌ ಮೀಟರ್‌ಗಳ ಕಾರ್ಯಕ್ಷಮತೆ ಕೊರತೆಯ ಹಿನ್ನೆಲೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ 4.68 ಲಕ್ಷದಷ್ಟು ಹೊಸ ಮೀಟರ್‌ ಗಳನ್ನು ಅಳವಡಿಸಲು ಮೆಸ್ಕಾಂ ಮುಂದಡಿಯಿಟ್ಟಿದೆ.

2 ವರ್ಷದ ಹಿಂದೆಯೇ ಹಳೆಯ ಮೀಟರ್‌ಗಳ ಸಮಸ್ಯೆಯ ಅರಿವಿದ್ದರೂ ಏಕಕಾಲದಲ್ಲಿ ಹೊಸ ಮೀಟರ್‌ಗಳು ಸರಬರಾಜು ಆಗದೇ ಇರುವುದರಿಂದ ಮೀಟರ್ ಬದಲಾವಣೆ ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಗ್ರಾಹಕರಿಗೆ ಸರಾಸರಿ ಬಿಲ್‌ ನೀಡಲಾಗುತ್ತಿತ್ತು. ಆದರೆ, ಇದು ಕೆಲವು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದರೆ, ಮಿತಿಮೀರಿ ವಿದ್ಯುತ್‌ ಬಳಸುವ ಕೆಲವು ಗ್ರಾಹಕರಿಂದಾಗಿ ಮೆಸ್ಕಾಂಗೂ ನಷ್ಟವಾಗುತ್ತಿತ್ತು. ಈ ಹಿಂದಿನ ಮೆಕ್ಯಾನಿಕಲ್‌ (ಚಕ್ರದಂತೆ ಸುತ್ತುವ) ಮೀಟರ್‌ ಗಳು ಬಹುತೇಕ ಕೆಟ್ಟುಹೋಗಿದ್ದವು. ಗ್ರಾಹಕ 100 ಯುನಿಟ್‌ ಬಳಸಿದರೆ ಸರಾಸರಿ 95 ಯುನಿಟ್‌ ಮಾತ್ರ ಅದರಲ್ಲಿ ದಾಖಲಾಗುತ್ತಿತ್ತು. ಇದರಿಂದ ಮೆಸ್ಕಾಂಗೆ ಯುನಿಟ್‌ ಲೆಕ್ಕಾಚಾರದಲ್ಲಿ ಕೊಂಚ ನಷ್ಟವಾಗುತ್ತಿತ್ತು. ಈ ಕಾರಣದಿಂದ ಮೆಕ್ಯಾನಿಕಲ್‌ ಮೀಟರ್‌ ಗಳನ್ನು ತೆರವುಗೊಳಿಸಿ ಸ್ಟಾಟಿಕ್‌ ಮೀಟರ್‌ ಅಳವಡಿಸಲಾಗುತ್ತಿದೆ. ಈ ಮೀಟರ್ ಗ್ರಾಹಕರು ಬಳಸಿದ ವಿದ್ಯುತ್ ನ ಯುನಿಟ್ ನ್ನು ನಿಖರವಾಗಿ ದಾಖಲಿಸುತ್ತದೆ.

Also Read  ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಸಿದ್ಧರಾಮಯ್ಯ!

ಮಂಗಳೂರು ವಿಭಾಗದಲ್ಲಿ 7,441, ಕಾವೂರು ಉಪವಿಭಾಗದಲ್ಲಿ 6,589, ಬಂಟ್ವಾಳ ಉಪವಿಭಾಗದಲ್ಲಿ 4,584, ಪುತ್ತೂರು ಉಪವಿಭಾಗದಲ್ಲಿ 2,945 ಹೀಗೆ ದಕ್ಷಿಣ ಕನ್ನಡದಲ್ಲಿ ಒಟ್ಟು 21,559 ಮೀಟರ್ ಹಾಗೂ ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಕಾರ್ಕಳ, ಕಾಪು, ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ, ಶಂಕರನಾರಾಯಣ, ಕೊಲ್ಲೂರು, ಕೋಟ, ನಿಟ್ಟೆ ಉಪವಿಭಾಗಗಳಲ್ಲಿ ಒಟ್ಟು 70 ಸಾವಿರ ಸ್ಟಾಟಿಕ್‌ ಮೀಟರ್‌ಗಳಿಗೆ ಬೇಡಿಕೆ ಇದ್ದು, 26,000 ಮೀಟರ್‌ ಅಳವಡಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.

Also Read  ಎಸ್ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆಯಿಂದ ಪ್ರಚೋದನಕಾರಿ ಭಾಷಣದ ಆರೋಪ ➤ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾದಿಂದ ಕಡಬ ಠಾಣೆಯಲ್ಲಿ ದೂರು ದಾಖಲು

error: Content is protected !!
Scroll to Top