“ನನ್ನ ಹೊಟ್ಟೆಯ ಸರ್ಜರಿಯ ಗುರುತು ಪ್ರೀತಿಯ ಸಂಕೇತ” – ತಂದೆಗೆ ಲಿವರ್ ದಾನ ಮಾಡಿದ ಪುತ್ರಿಯಿಂದ ಪೋಸ್ಟ್

(ನ್ಯೂಸ್ ಕಡಬ) newskadaba.com ಮುಂಬೈ, ಸೆ. 22.  2022ರ ಫೆ. 15ರಂದು ತನ್ನ ತಂದೆಗೆ ಲಿವರ್ ದಾನ ಮಾಡಿದ ಪುತ್ರಿಯೋರ್ವಳು ಹೊಟ್ಟೆಯ ಮೇಲಿನ ಹೊಲಿಗೆಗಳು ಪ್ರೀತಿಯ ಸಂಕೇತ ಎಂದು ಸಾಕ್ಷಿ ಸಂತಸ ವ್ಯಕ್ತಪಡಿಸಿದ್ದಾಳೆ.

“ನನ್ನ ತಂದೆಗೆ 2022ರಲ್ಲಿ ಲಿವರ್ ಸಿರೋಸಿಸ್ ಕೊನೆಯ ಹಂತದಲ್ಲಿತ್ತು. ಆಗ ಲಿವರ್ ಟ್ರಾನ್ಸ್​ಪ್ಲಾಂಟ್​ ಮಾಡದಿದ್ದರೆ ತಂದೆಯ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದ್ದರು. ಆಗ ನನ್ನ ಅಪ್ಪನೇ ನನ್ನ ಭವಿಷ್ಯ, ಅವರಿಗಾಗಿ ನಾನು ಏನು ಮಾಡಲೂ ಸಿದ್ಧ ಎಂದು ಲಿವರ್​ ದಾನ ಮಾಡಲು ಮುಂದೆ ಬಂದೆ. ನಾನು ಅಪ್ಪ ಒಂದಿಷ್ಟು ದಿನ ಐಸಿಯುನಲ್ಲಿ ಕಳೆದೆವು ಆದರೆ ಈಗ ನಾನೂ ನನ್ನ ಅಪ್ಪ ಆರೋಗ್ಯವಾಗಿದ್ದೇವೆ. ನನ್ನ ಹೊಟ್ಟೆಯ ಮೇಲಿನ ಹೊಲಿಗೆಗಳು ಪ್ರೀತಿಯ ಸಂಕೇತ” ಎಂದು 23ನೇ ವಯಸ್ಸಿನ ಸಾಕ್ಷಿ ತ್ಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ವಿಡೀಯೊವೊಂದನ್ನು ಹಂಚಿಕೊಳ್ಳಲಾಗಿದೆ.

Also Read  ಬಿಜೆಪಿ ನಾಯಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

error: Content is protected !!
Scroll to Top