KPSC- 40 ಕ್ಕೂ ಅಧಿಕ ಹುದ್ದೆಗೆ ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 22. ಕರ್ನಾಟಕ ಲೋಕಸೇವಾ ಆಯೋಗ 2016, 2017, 2018, 2019, 2020ನೇ ಸಾಲಿನಲ್ಲಿ ಅಧಿಸೂಚನೆ ಹೊರಡಿಸಿದ್ದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 40 ಕ್ಕೂ ಹೆಚ್ಚು ವಿವಿಧ ಹುದ್ದೆಗಳಿಗೆ ಇದೀಗ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕೆಪಿಎಸ್.ಬಿಸಿಬಿ, ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿವಿಧ ವಿಷಯಗಳ ಶಿಕ್ಷಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಜಲಸಂಪನ್ಮೂಲ ಅಭಿವೃದ್ಧಿ ನಿಗಮ, ನವೋದಯ ಶಾಲೆಗಳ ಶಿಕ್ಷಕರು, ಮೌಲಾನಾ ಆಜಾದ್ ಶಾಲೆಗಳು, ಅಲ್ಪಸಂಖ್ಯಾತರ ನಿರ್ದೇಶನಾಲಯದಡಿಯಲ್ಲಿನ ಶಾಲೆಗಳ ಶಿಕ್ಷಕರು, ಕೆಆರ್.ಇ.ಐಎಸ್ ಶಾಲೆಗಳು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಒಟ್ಟು 46 ಹೆಚ್ಚುವರಿ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

KPSCಯು 40 ಕ್ಕೂ ಹೆಚ್ಚು ವಿವಿಧ ಪೋಸ್ಟ್ ಗಳಿಗೆ ಹೆಚ್ಚುವರಿ ಅಭ್ಯರ್ಥಿಗಳ ಆಯ್ಕೆಪಟ್ಟಿ ಬಿಡುಗಡೆ ಮಾಡಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಆಯ್ಕೆಯಾಗಿ ಅಂತಿಮ ಪಟ್ಟಿಯಲ್ಲಿ ಹೆಸರು ಪಡೆಯದೇ ಇದ್ದ ಅಭ್ಯರ್ಥಿಗಳು ಇದೀಗ ಹೆಚ್ಚುವರಿ ಪಟ್ಟಿಯನ್ನು ಪರಿಶೀಲನೆ ನಡೆಸಬಹುದು. ಕೆಪಿಎಸ್ಸಿ ಪ್ರಸ್ತುತ ಪ್ರಕಟಿಸಲಾದ ಹೆಚ್ಚುವರಿ ಆಯ್ಕೆಪಟ್ಟಿಗೆ ಪರಿಗಣಿಸಲಾದ ವರ್ಗಾವಾರು ಕಟ್ ಆಫ್ ಅಂಕಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ.

Also Read  ಜಂಬೂಸವಾರಿ: ಸರಳ ದಸರಾಗೆ ಅರಣ್ಯ ಇಲಾಖೆಯಿಂದ ಐದು ಆನೆಗಳ ಪಟ್ಟಿ ಸಿದ್ದ

ಕೆಪಿಎಸ್ಸಿ ಹೆಚ್ಚುವರಿ ಆಯ್ಕೆಪಟ್ಟಿ ಚೆಕ್ ಮಾಡುವ ವಿಧಾನ:
# ಮೊದಲಿಗೆ, ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಮುಖಪುಟ ತೆರೆದುಕೊಳ್ಳಲಿದ್ದು, ಅದರಲ್ಲಿ ಪಟ್ಟಿಗಳು >> ಆಯ್ಕೆಪಟ್ಟಿ >> ಹೆಚ್ಚುವರಿ ಪಟ್ಟಿ’ಗಳು ಸೆಲೆಕ್ಟ್ ಮಾಡಿ ಕ್ಲಿಕ್ ಮಾಡಿಕೊಳ್ಳಿ. ಬಳಿಕ ನೀವು ಆಯೋಗ ಬಿಡುಗಡೆ ಮಾಡಿರುವ 46 ವಿವಿಧ ಹೆಚ್ಚುವರಿ ಪಟ್ಟಿ ನೋಡಬಹುದು. ನೀವು ಅರ್ಜಿ ಸಲ್ಲಿಸಿ, ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಹುದ್ದೆಗೆ ಹೆಚ್ಚುವರಿ ಪಟ್ಟಿ ಇದ್ದಲ್ಲಿ, ಕ್ಲಿಕ್ ಮಾಡಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ. ಹುದ್ದೆವಾರು ಕಟ್ ಆಫ್ ಅಂಕಗಳನ್ನು ಪರಿಶೀಲಿಸಲು ಕೆಪಿಎಸ್ಸಿ ವೆಬ್ ಸೈಟ್ ಗೆ ಭೇಟಿ ನೀಡಿ. ಬಳಿಕ ಅರ್ಜಿದಾರರ ಗಮನಕ್ಕೆ ಎಂದಿರುವ ಕಾಲಂ ಅಡಿಯಲ್ಲಿ ‘ಕಟ್-ಆಫ್ ಅಂಕಗಳು’ ಎಂದಿರುವಲ್ಲಿ ಕ್ಲಿಕ್ ಮಾಡಿಕೊಳ್ಳಿ. ಈಗ ಹುದ್ದೆವಾರು ಕಟ್ಆಫ್ ಅಂಕದ ಲಿಂಕ್ ಕಾಣಲಿದ್ದು, ಅದನ್ನು ಕ್ಲಿಕ್ ಮಾಡಿದರೆ ಕಟ್ ಆಫ್ ಅಂಕ ಚೆಕ್ ಮಾಡಬಹುದು.

Also Read  ತುಳು ಅಕಾಡೆಮಿ ಪ್ರಕಟಿತ ಪುಸ್ತಕ ಬಿಡುಗಡೆ ಸಮಾರಂಭ

error: Content is protected !!
Scroll to Top