ಟಾರ್ಗೆಟ್ ಇಲ್ಯಾಸ್ ಹಂತಕರಲ್ಲಿ ಓರ್ವ ಪೊಲೀಸ್ ಬಲೆಗೆ..? ► ಇತ್ತೀಚೆಗೆ ತನ್ನದೇ ಗ್ರೂಪ್‌ನಿಂದ ಕೊಲೆಯಾಗಿದ್ದ ಟಾರ್ಗೆಟ್ ಇಲ್ಯಾಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.08. ಇತ್ತೀಚಿಗೆ ತನ್ನದೇ ಗ್ರೂಪ್‌ನ ತಂಡದಿಂದ ಬರ್ಬರ ರೀತಿಯಲ್ಲಿ ಹತ್ಯೆಗೀಡಾಗಿದ್ದ ಉಳ್ಳಾಲದ ಟಾರ್ಗೆಟ್ ಗ್ರೂಪ್‌ನ ಪ್ರಮುಖನಾಗಿದ್ದ ಇಲ್ಯಾಸ್ ಕೊಲೆ ಆರೋಪಿಗಳಲ್ಲಿ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಟಾರ್ಗೆಟ್ ಗ್ರೂಪ್ ನ ಮುಖ್ಯಸ್ಥ ಇಲ್ಯಾಸ್ ಮರ್ಡರ್ ಪ್ರಕರಣದ ಆರೋಪಿ ಶಮೀರ್ ಎಂಬವನನ್ನು ಸಿಸಿಬಿ ಪೋಲೀಸರು ಕೇರಳದಲ್ಲಿ ಬಂಧಿಸಿ ಹೆಚ್ಚಿನ ತನಿಖೆಗಾಗಿ ಮಂಗಳೂರಿಗೆ ಕರೆ ತಂದಿದ್ದಾರೆ ಎನ್ನಲಾಗಿದೆ. ಇಲ್ಯಾಸ್ ನನ್ನು ನಾಲ್ಕು ಮಂದಿ ಹಂತಕರು ಕೊಲೆಗೈದಿದ್ದಾರೆನ್ನುವ ಪ್ರಾಥಮಿಕ ಮಾಹಿತಿಯಾಧರಿಸಿ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು ಓರ್ವನನ್ನು ಬಂಧಿಸಿದ್ದು, ಇನ್ನುಳಿದ ಹಂತಕಾರಿಗಾಗಿ ಬಲೆಬೀಸಿದ್ದಾರೆ.

Also Read  ಬೆಳ್ಳಾರೆ: ಐತಿಹಾಸಿಕ ಬಂಗ್ಲೆಗುಡ್ಡೆಯಲ್ಲಿ ಬುಶ್ರಾ ವಿದ್ಯಾಸಂಸ್ಥೆ ಕಾವು ಹಾಗೂ ಸ್ನೇಹಿತರ ಕಲಾ ಸಂಘದ ವತಿಯಿಂದ ಅಮರಕ್ರಾಂತಿಯ ನೆನಪು ಕಾರ್ಯಕ್ರಮ

error: Content is protected !!
Scroll to Top