ಕಾವೇರಿ ವಿವಾದ- ಕನ್ನಡ ಪರ ಸಂಘಟನೆಗಳಿಂದ ಬಿಎಸ್ಎನ್ಎಲ್ ಕಛೇರಿಗೆ ಮುತ್ತಿಗೆ ಯತ್ನ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಸೆ. 22. ಕಾವೇರಿ ನದಿ ನೀರು ವಿವಾದದ ಹಿನ್ನಲೆ ಕರ್ನಾಟಕ-ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಬಿಎಸ್ಎನ್ಎಲ್ ಕಚೇರಿಗೆ ಮುತ್ತಿಗೆ ಹಾಕುವ ಚಳವಳಿ ಶುಕ್ರವಾರದಂದು ನಡೆಯಿತು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿನಿತ್ಯ ವಿನೂತನ ಚಳವಳಿ ನಡೆಸುತ್ತಿದ್ದು, ಇಂದು ಕೇಂದ್ರ ಸರ್ಕಾರ ಸ್ವಾಮ್ಯದಲ್ಲಿರುವ ಬಿ.ಎಸ್.ಎನ್.ಎಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಚಾಮರಾಜನಗರದ ವಿವಿಧ ಕನ್ನಡ ಪರ ಸಂಘಟನಾ ಕಾರ್ಯಕರ್ತರು ಕನ್ನಡ ಧ್ವಜವನ್ನು ಹಿಡಿದು ಸುಪ್ರಿಂ ಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆ ಹಾಗೂ ಆದೇಶವನ್ನು ಖಂಡಿಸಿ ಪಾದಯಾತ್ರೆ ಮೂಲಕ ಚಾಮಲ್ ಬೀದಿಯಲ್ಲಿರುವ ಬಿ.ಎಸ್.ಎನ್ ಎಲ್ ಕಚೇರಿಗೆ ತೆರಳಿ ಧರಣಿ ನಡೆಸಿ ಬಳಿಕ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕೆಲ ಸಮಯದ ಬಳಿಕ ಬಿಡುಗಡೆಗೊಳಿಸಿದರು.

Also Read  ಅಂಗಾರ ಮತ್ತು ಮಠಂದೂರುರವರಿಗೆ ತಪ್ಪಿದ ಬಿಜೆಪಿ ಟಿಕೆಟ್ ➤ ಸುಳ್ಯ ಹಾಗೂ ಪುತ್ತೂರಿನ ಬಿಜೆಪಿ ಅಭ್ಯರ್ಥಿಗಳು ಯಾರು ಗೊತ್ತೇ..?

error: Content is protected !!
Scroll to Top