ಮಂಗಳೂರು: ಎಚ್‍.ಡಿ.ಎಫ್‍.ಸಿ “ಚಕ್ರಗಳ ಮೇಲೆ ಬ್ಯಾಂಕ್” ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 22. ಎಚ್.ಡಿ.ಎಫ್.ಸಿ ಬ್ಯಾಂಕ್ ಗ್ರಾಹಕರ ಮನೆ ಬಾಗಿಲಿಗೆ ಸೇವೆ ನೀಡುವ ಉದ್ದೇಶದಿಂದ “ಚಕ್ರಗಳ ಮೇಲೆ ಬ್ಯಾಂಕ್” ಯೋಜನೆಗೆ ಗುರುವಾರದಂದು ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕ್ ಗಳ ಉಗಮ ಸ್ಥಳವಾಗಿದ್ದು ಎಚ್.ಡಿ.ಎಫ್.ಸಿ ಬ್ಯಾಂಕ್ ಚಕ್ರಗಳ ಮೇಲೆ ಬ್ಯಾಂಕ್ ಸೇವೆಯ ಮೂಲಕ ಹಳ್ಳಿ ಹಳ್ಳಿಗಳ ಜನರನ್ನು ತಲುಪಲು ಮುಂದಾಗಿರುವುದು ಶ್ಲಾಘನೀಯ. ಈ ಮೂಲಕ ಹಳ್ಳಿಭಾಗಗಳ ಜನರು ಬ್ಯಾಂಕ್ ಸೇವೆಯನ್ನು ಪಡೆಯುವಂತಾಗಲಿ. ಬಿಸಿ ರೋಡ್, ವಿಟ್ಲ, ಉಜಿರೆ, ಉಪ್ಪಿನಂಗಡಿ, ಪುತ್ತೂರು ಮತ್ತಿತರ 24 ರಿಂದ 40 ಕಿಲೋಮೀಟರ್ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಈ ವಾಹನ ಸೇವೆ ಒದಗಿಸಲಿದೆ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ವಾಹನದಲ್ಲಿ ಎಟಿಎಂ ಮಾತ್ರವಲ್ಲದೇ ನೂತನ ಅಕೌಂಟ್ ತೆರೆಯುವುದರಿಂದ ಹಿಡಿದು ನಗದು ಠೇವಣಿ, ಡೆಪಾಸಿಟ್, ಲೋನ್ ಸೌಲಭ್ಯ ಕೂಡ ಲಭ್ಯವಿದೆ ಬ್ಯಾಂಕ್ ನಲ್ಲಿ ಲಭ್ಯವಿರುವ 21 ರೀತಿಯ ಎಲ್ಲಾ ಸೌಲಭ್ಯ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು.

Also Read  ಸುಬ್ರಹ್ಮಣ್ಯ: ಅಪರಿಚಿತ ಶವ ಪತ್ತೆ ➤ ನದಿಯಲ್ಲಿ ತೇಲುತ್ತಿದ್ದ ಮೃತದೇಹ

ಈ ಸಂದರ್ಭದಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕ್‍ನ ಸರ್ಕಲ್ ಹೆಡ್ ಮತ್ತು ಹಿರಿಯ ಉಪಾಧ್ಯಕ್ಷ ಶುಭಂಕರ್ ಬೋಸ್, ದಕ್ಷಿಣ ಕನ್ನಡ ಕ್ಲಸ್ಟರ್ ಹೆಡ್ ಚಂದನ್ ಶಿವಣ್ಣ, ಉಡುಪಿ ಕ್ಲಸ್ಟರ್ ಮುಖ್ಯಸ್ಥ ವಾಸುದೇವ ಪಿ, ಬಿ.ಸಿ.ರೋಡ್-ಬಂಟ್ವಾಳ ಶಾಖ ಮುಖ್ಯಸ್ಥ ಪ್ರಖ್ಯಾತ್ ಶೆಟ್ಟಿ, ಪುತ್ತೂರು ಶಾಖಾ ವ್ಯವಸ್ಥಾಪಕ ಅನೀಶ್ ಶೆಟ್ಟಿ, ಸುರತ್ಕಲ್ ಶಾಖಾ ವ್ಯವಸ್ಥಾಪಕ ಉದಯ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

Also Read  ಸ್ಟೀಲ್ ನಟ್‌ ಬಳಸಿ ಶಿವನ ಮಾದರಿಯ ಲೋಹ ಶಿಲ್ಪ ನಿರ್ಮಾಣ ’ಇಂಟರ್‌ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಗೆ ದಾಖಲೆ

error: Content is protected !!
Scroll to Top