ದಕ್ಷಿಣ ಕನ್ನಡ ಮೀನು ಮಾರಾಟ ಫೆಡರೇಶನ್ ಗೆ ವಂಚನೆ- ವ್ಯಕ್ತಿಗೆ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 22. ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ (ಲಿ.) ಗೆ ಮಂಜುನಾಥ ಖಾರ್ವಿ ಅವರು ನೀಡಿದ ಮೂರು ಚೆಕ್‌ಗಳು ಬೌನ್ಸ್‌ ಆದ ಹಿನ್ನೆಲೆ ಒಟ್ಟು 88 ಲಕ್ಷ ರೂ. ಪಾವತಿಸುವಂತೆ ನ್ಯಾಯಾಲಯ ತೀರ್ಪು ನೀಡಿತ್ತು. ಅದರಂತೆ ಹಣ ಪಾವತಿಗೆ ವಿಫಲರಾದ ಮಂಜುನಾಥ್ ಖಾರ್ವಿ ವಿರುದ್ಧ ವಾರಂಟ್ ಜಾರಿ ಮಾಡಿದ್ದ ಹಿನ್ನೆಲೆ, ಪೊಲೀಸರು ಉಪ್ಪುಂದದ ಮನೆಯಲ್ಲಿ ಬಂಧಿಸಿ 5ನೇ ಜೆಎಂಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕುರಿತು ವರದಿಯಾಗಿದೆ.


ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ ಲಿ. ಸಂಸ್ಥೆಯಿಂದ ಮಂಜುನಾಥ ಖಾರ್ವಿ ಮೀನು ಖರೀದಿ ಮಾಡಿದ್ದರು. ಅಲ್ಲದೆ ಫೆಡರೇಷನ್‌ಗೆ ಮೀನು ಮಾರಾಟವಾದ ಕಮಿಷನ್‌ ಕೂಡ ಬಾಕಿ ಇರಿಸಿದ್ದರು. ಈ ಮೊತ್ತಕ್ಕೆ ಮೂರು ಚೆಕ್‌ಗಳನ್ನು ಫೆಡರೇಷನ್‌ಗೆ ನೀಡಿದ್ದರು. ಆ ಚೆಕ್‌ಗಳನ್ನು ಬ್ಯಾಂಕ್‌ಗೆ ನೀಡಿದಾಗ ಖಾತೆಯಲ್ಲಿ ಹಣವಿಲ್ಲದೆ ಅಮಾನತುಗೊಂಡಿದ್ದವು. ಇದಕ್ಕೆ ಸಂಬಂಧಿಸಿದ ನೋಟಿಸ್‌ ನೀಡಿದರೂ ಬಾಕಿ ಮೊತ್ತ ನೀಡಿರಲಿಲ್ಲ. ಈ ಕುರಿತು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಲಾಗಿತ್ತು. ಅವರ ಮೇಲೆ ಮೂರು ಪ್ರಕರಣ ದಾಖಲಾಗಿತ್ತು.

Also Read  ಕಡಬದಲ್ಲಿ ಮತ್ತೆ ಕೊರೋನಾ ಸದ್ದು ➤ 21 ವರ್ಷದ ಯುವಕನಲ್ಲಿ ಕೊರೋನಾ ದೃಢ

ನ್ಯಾಯಾಲಯ ಮೂರು ಪ್ರಕರಣಗಳಲ್ಲಿ ಆರೋಪಿ 5 ಲ.ರೂ., 53 ಲ.ರೂ. ಮತ್ತು 30 ಲ.ರೂ. ಸೇರಿದಂತೆ ಒಟ್ಟು 88 ಲ.ರೂ. ಪಾವತಿಸಬೇಕು ಎಂದು ಈ ಹಿಂದೆ ತೀರ್ಪು ನೀಡಿತ್ತು.ದೂರುದಾರರ ಪರ ವೆರಿಟಾಸ್‌ ಲೆಗೀಸ್‌ ಅಸೋಸಿಯೇಷನ್‌ ಮಂಗಳೂರಿನ ವಕೀಲರಾದ ರಾಘವೇಂದ್ರ ರಾವ್‌, ಗೌರಿ ಶೆಣೈ ವಾದಿಸಿದ್ದರು

error: Content is protected !!
Scroll to Top