ಹಿಜಾಬ್ ಧರಿಸದಿದ್ದರೆ 10 ವರ್ಷಗಳ ಜೈಲು ಶಿಕ್ಷೆ- ಸರಕಾರ

(ನ್ಯೂಸ್ ಕಡಬ) newskadaba.com ಇರಾನ್‌, ಸೆ. 22. ಇಸ್ಲಾಮಿಕ್ ರಾಷ್ಟ್ರವಾದ ಇರಾನ್‌ನಲ್ಲಿ ಹಿಜಾಬ್‌ ವಿರುದ್ಧ ಮಹಿಳೆಯರ ತೀವ್ರ ಪ್ರತಿಭಟನೆ ನಡೆಯುತ್ತಿದ್ದರೂ ಬದಲಾವಣೆಗೆ ಒಪ್ಪದ ಸರ್ಕಾರ, ಇದೀಗ ಹಿಜಾಬ್ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ.


ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಹಿಜಾಬ್‌ ಧರಿಸಲು ನಿರಾಕರಿಸುವ ಮುಸ್ಲಿಂ ಮಹಿಳೆಯರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಮಸೂದೆಯನ್ನು ಇರಾನ್‌ ಸಂಸತ್ತು ಅಂಗೀಕರಿಸಿದೆ. ಹಿಜಾಬ್‌ ಧರಿಸದ ಹಾಗೂ ಹಿಜಾಬ್‌ ಧರಿಸಬೇಡಿ ಎಂದು ಮಹಿಳೆಯರನ್ನು ಬೆಂಬಲಿಸುವವರಿಗೆ ಮಸೂದೆ ಪ್ರಕಾರ ಭಾರೀ ದಂಡ ವಿಧಿಸಲಾಗುತ್ತದೆ.


ಹಿಜಾಬ್‌ ಸರಿಯಾಗಿ ಧರಿಸಿಲ್ಲ ಎಂಬ ಕಾರಣಕ್ಕೆ ನೈತಿಕ ಪೊಲೀಸರಿಂದ ಹಲ್ಲೆಗೊಳಗಾಗಿ ಮೃತಪಟ್ಟಿದ್ದ ಮಹ್ಸಾ ಅಮಿನಿ (22) ಮೃತಪಟ್ಟು ಒಂದು ವರ್ಷ ಕಳೆದ ಬೆನ್ನಲ್ಲೇ ಸರ್ಕಾರವು ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

error: Content is protected !!
Scroll to Top