ಅಕ್ರಮ ಮರದ ದಿಮ್ಮಿ ಸಾಗಾಟ – ಲಾರಿ, ಮರದ ದಿಮ್ಮಿ ಸಹಿತ ಚಾಲಕ ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 21. ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಮರದ ದಿಮ್ಮಿಗಳನ್ನು ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಆರೋಪಿಯನ್ನು ಲಾರಿ ಸಹಿತ ವಶಕ್ಕೆ ತೆಗೆದುಕೊಂಡ ಘಟನೆ ನೆಲ್ಯಾಡಿಯ ಹೊಸಮಜಲು ಎಂಬಲ್ಲಿ ನಡೆದಿದೆ.


ಆರೋಪಿಯನ್ನು ಸಕಲೇಶಪುರದ ಆನಂಗಿ ಮನೆ ನಿವಾಸಿ ರಜಾಕ್‌ ಬಿನ್‌ ಅಬ್ಬಾಸ್‌ ಎಂದು ಗುರುತಿಸಲಾಗಿದೆ. ಆರೋಪಿ ಸಹಿತ ಲಾರಿಯಲ್ಲಿ ಸಾಗಿಸುತ್ತಿದ್ದ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಂದೀಪ್‌ ಸಿ.ಕೆ., ರಾವುತ್ತಪ್ಪ ಬಿರಾದಾರ್‌, ರಾಜೇಶ್‌ ಮತ್ತು ದಿನೇಶ್‌ ಭಾಗವಹಿಸಿದ್ದರು.

Also Read  ಉಪ್ಪಿನಂಗಡಿ: ವರ್ಷದ ಹಿಂದೆ ಪ್ರೇಮಿಸಿ ವಿವಾಹವಾಗಿದ್ದ ತರುಣಿ ವಿಷಸೇವಿಸಿ ಆತ್ಮಹತ್ಯೆ

error: Content is protected !!
Scroll to Top