ಫೆ.18 ರಂದು ಬಿಜೆಪಿಯ ಮಾಸ್ಟರ್ ಮೈಂಡ್ ಅಮಿತ್ ಷಾ ಸುಬ್ರಹ್ಮಣ್ಯಕ್ಕೆ…? ► ಕರಾವಳಿಯಲ್ಲಿ ಹೆಣೆಯುತ್ತಾರಾ ಕಾಂಗ್ರೆಸ್ ಮುಕ್ತ ಕರ್ನಾಟಕದ ರಣತಂತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.08. ಗುಜರಾತ್‌ನಲ್ಲಿ ಆಡಳಿತದ ಚುಕ್ಕಾಣಿಯನ್ನು ಹಿಡಿದ ನಂತರ ಇದೀಗ ಕಾಂಗ್ರೆಸ್ ಮುಕ್ತ ಕರ್ನಾಟಕದ ಗುರಿಯನ್ನು ಹೊಂದಿರುವ ಬಿಜೆಪಿಯು ಇದೀಗ ಚುನಾವಣಾ ರಣತಂತ್ರವನ್ನು ಹೆಣೆದಿದ್ದು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರು ಇದೀಗ ಬಿಜೆಪಿಯ ತವರಾದ ಕರಾವಳಿಗೆ ಆಗಮಿಸಲು ದಿನಾಂಕ ನಿಗದಿಯಾಗಿದೆ.

ಫೆಬ್ರವರಿ 18 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಅವರು ದೇವಾಲಯದ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಮರುದಿನ ಫೆಬ್ರವರಿ 19 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಅವರು ಕರಾವಳಿಯಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Also Read  ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ಗಳ ಪರಿಶೀಲನೆ - ಜಿಲ್ಲಾ ಆರೋಗ್ಯಾಧಿಕಾರಿ

error: Content is protected !!
Scroll to Top