ಅಕ್ರಮ ಗೋಮಾಂಸ ಸಾಗಾಟ- ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 21. ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗೋಮಾಂಸವನ್ನು ಮಾರಾಟದ ಉದ್ದೇಶದಿಂದ ಕೊಂಡೊಯ್ಯುತ್ತಿದ್ದ ಮಾಹಿತಿ ಪಡೆದ ವೇಣೂರು ಪೊಲೀಸರು ಮಾಂಸ ಸಹಿತ ಆರೋಪಿಗಳನ್ನು ವಶಪಡಿಸಿಕೊಂಡ ಘಟನೆ ಕುತ್ಲೂರು ಗ್ರಾಮದಲ್ಲಿ ನಡೆದಿದೆ.


ಬಂಧಿತರನ್ನು ಕೇರಳ ನಿವಾಸಿ ಜಿನು ತೋಮಸ್‌ (34) ಮತ್ತು ಕುತ್ಲೂರು ನಿವಾಸಿ ರಂಜಿತ್‌ (31) ಎಂದು ಗುರುತಿಸಲಾಗಿದೆ. ಇವರು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗೋ ವಧೆ ಮಾಡಿ ಮಾಂಸ ಮಾಡಿ ಮಾರಾಟದ ಉದ್ದೇಶದಿಂದ ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ. ಆರೋಪಿಗಳೊಂದಿಗೆ ಸಾಗಾಟಕ್ಕೆ ಬಳಸಿದ ಜೀಪು ಸಹಿತ ಒಂದು ಗಂಡು ಕರುವನ್ನು ವಶಪಡಿಸಿ ಪ್ರಕರಣ ದಾಖಲಿಸಲಾಗಿದೆ.

Also Read  ಮಾಣಿ: ಐರಾವತ ಬಸ್, ಲಾರಿ, ಕಾರು ಮಧ್ಯೆ ಸರಣಿ ಅಪಘಾತ ➤ ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯ

 

error: Content is protected !!
Scroll to Top