3 ವರ್ಷದ ಬಳಿಕ ವಿದೇಶದಿಂದ ಬಂದು ಅಮ್ಮನಿಗೆ ಸರ್ಪ್ರೈಸ್ ಕೊಟ್ಟ ಮಗ..! – ಹೃದಯಸ್ಪರ್ಶಿ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 21. ಕಳೆದ ಮೂರು ವರ್ಷಗಳ ಹಿಂದೆ ಕೆಲಸಕ್ಕಾಗಿ ವಿದೇಶಕ್ಕೆ ತೆರಳಿದ್ದ ಮಗ ಊರಿಗೆ ಬರುವ ಸುಳಿವು ನೀಡದೇ ದಿಢೀರ್ ಆಗಿ ತಾಯಿ ಮುಂದೆ ಬಂದು ನಿಂತರೆ ಆ ತಾಯಿಯ ಖುಷಿಗೆ ಪಾರವೇ ಇರದು. ಇಂತಹದ್ದೊಂದು ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಕುಂದಾಪುರದ ರೋಹಿತ್ ಎಂಬಾತ ಮೂರು ವರ್ಷಗಳ ಬಳಿಕ ದುಬೈನಿಂದ ಬಂದು ಅಮ್ಮನಿಗೆ ಸರ್ಪ್ರೈಸ್ ನೀಡಿದ್ದಾನೆ. ಮಗನ ಆಗಮನದ ಸುಳಿವು ಇರದ ತಾಯಿ ಎಂದಿನಂತೆ ಮಾರ್ಕೆಟ್ ನಲ್ಲಿ ಮೀನು ಮಾರುತ್ತಾ ಜೀವನ ಸಾಗಿಸುತ್ತಿದ್ದರು. ದುಬೈನಿಂದ ನೇರವಾಗಿ ಬಂದ ಮಗ, ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಅಮ್ಮನ ಬಳಿ ಬಂದು ಗ್ರಾಹಕನಂತೆ ಮೀನು ಖರೀದಿಸಲು ಮುಂದಾಗಿದ್ದಾನೆ. ಗ್ರಾಹಕನಂತೆ ಮಾತನಾಡುತ್ತಲೇ ಮುಖದಿಂದ ಕರವಸ್ತ್ರ ತೆಗೆದು ಅಮ್ಮನಿಗೆ ಅಚ್ಚರಿ ಮೂಡಿಸಿದ್ದಾನೆ.

Also Read  ಇಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ದುಬೈನಲ್ಲಿದ್ದ ಮಗ ಕಣ್ಮುಂದೆ ಪ್ರತ್ಯಕ್ಷವಾಗಿರುವುದನ್ನು ಕಂಡು ಅಮ್ಮನ ಕಣ್ಣಂಚಲ್ಲಿ ಆನಂದ ಭಾಷ್ಪ… ಮೂರು ವರ್ಷಗಳ ಬಳಿಕ ತಾಯಿಯನ್ನು ನೋಡಿದ ಮಗನೂ ಅರೆ ಕ್ಷಣ ಭಾವುಕನಾಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಹೃದಯ ಸ್ಪರ್ಶಿಯಾಗಿದೆ.

error: Content is protected !!
Scroll to Top