ಖಾಸಗಿ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ – ಪೊಲೀಸ್ ಠಾಣೆಯ ಮೊರೆಹೋದ ಶಿಕ್ಷಕಿ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಸೆ. 20. ಶಾಲಾ ಶಿಕ್ಷಕಿಯ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಧಮ್ಕಿ ಹಾಕುವುದಲ್ಲದೇ 10 ಲಕ್ಷ ರೂಪಾಯಿ ಹಣ ನೀಡದೇ ಇದ್ರೆ ಏರಿಯಾದಲ್ಲಿ ದೊಡ್ಡದಾಗಿ ಫ್ಲೆಕ್ಸ್ ಹಾಕುವುದಾಗಿ ಬ್ಲ್ಯಾಕ್​ ಮೇಲ್ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.


ಬ್ಲ್ಯಾಕ್​ ಮೇಲ್ ಮಾಡಿರುವ ಆರೋಪಿಗಳು ಅಸೀಮ್ ಹಾಗೂ ಮಯೂರ್ ಎಂದು ಗುರುತಿಸಲಾಗಿದೆ. ಅಸೀಮ್ ಹಾಗೂ ಮಯೂರ್ ಶಿಕ್ಷಕಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಪತಿ ಹಾಗೂ ಕುಟುಂಬಸ್ಥರಿಗೆ ಕಳುಹಿಸಿದ್ದಾರೆ. ಅಸೀಮ್ ಶಿಕ್ಷಕಿಯ ಜೊತೆ ಕಳೆದ 7 ವರ್ಷಗಳಿಂದ ಸ್ನೇಹಿತನಾಗಿದ್ದ. ಆದರೆ, ಶಿಕ್ಷಕಿ ಕಳೆದ 2 ವರ್ಷದ ಹಿಂದೆ ಬೇರೊಬ್ಬನೊಂದಿಗೆ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ. ವಿವಾಹದ ಬಳಿಕ ಪತಿಯನ್ನು ಬಿಟ್ಟು ನನ್ನ ಜೊತೆ ಬಾ ಎಂದು ಹಿಂದೆ ಬಿದ್ದಿದ್ದ. ಪತಿಯನ್ನು ಬಿಟ್ಟು ಬರದೇ ಇದ್ದರೆ ನಮ್ಮಿಬ್ಬರ ಖಾಸಗಿ ವೀಡಿಯೊ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಬಾರದು ಎಂದರೆ 10 ಲಕ್ಷ ರೂ. ಹಣ ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾನೆ. ಇದರಿಂದ ನೊಂದ ಶಿಕ್ಷಕಿ ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Also Read  ಇಂದಿನಿಂದ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ

error: Content is protected !!
Scroll to Top