ಮಹಿಳಾ ಇಂಜಿನಿಯರ್ ಗೆ ಲೈಂಗಿಕ ಕಿರುಕುಳ ಆರೋಪ ಹಿರಿಯ ಇಂಜಿನಿಯರ್ ಸಸ್ಪೆಂಡ್

(ನ್ಯೂಸ್ ಕಡಬ) newskadaba.com ರಾಯಚೂರು, ಸೆ. 20. ಜೆಸ್ಕಾಂ ಮಹಿಳಾ ಎಂಜಿನಿಯರ್ ಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಹಿರಿಯ ಇಂಜಿನಿಯರ್ ನ ಅಮಾನತು ಮಾಡಿ ಆದೇಶಿಸಲಾಗಿದೆ.


ಆರೋಪಿ ಜೆಸ್ಕಾಂ ಇಇ ಶ್ರೀನಿವಾಸ್ ಅಮಾನತು ಆದವರು. ರಾಯಚೂರಿನಲ್ಲಿ ಜೆಸ್ಕಾಂ ಹಿರಿಯ ಇಂಜಿನಿಯರ್ ಆಗಿರುವ ಶ್ರೀನಿವಾಸ್, ಮಹಿಳಾ ಇಂಜಿನಿಯರ್ ಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಶ್ರೀನಿವಾಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂತ್ರಸ್ತ ಮಹಿಳೆ ಹಾಗೂ ಜೆಸ್ಕಾಂ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಇ ಶ್ರೀನಿವಾಸ್ ನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

Also Read  ಜಲ್ಲಿ ಮಿಕ್ಸರ್ - ಸ್ಕೂಟಿ ಡಿಕ್ಕಿ ►ಇಬ್ಬರು ಮೃತ್ಯು

error: Content is protected !!
Scroll to Top