(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ಜನಪ್ರಿಯ ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ನ ಹೊಸ ಫೀಚರ್ ವಾಟ್ಸಾಪ್ ಚಾನೆಲ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭಿಸಿದ್ದಾರೆ.
ಸಾರ್ವಜನಿಕರು ಈ ವಾಟ್ಸಾಪ್ ಖಾತೆಯನ್ನು ಫಾಲೋ ಮಾಡಬಹುದಾಗಿದೆ. ದೇಶದಲ್ಲಿ ಈ ರೀತಿ ಚಾನೆಲ್ ಆರಂಭಿಸಿದ ಮೊದಲ ಸಿಎಂ ಸಿದ್ದರಾಮಯ್ಯ ಅವರಾಗಿದ್ದಾರೆ. ಜನ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವ ಸಿದ್ದರಾಮಯ್ಯ ಅವರು, ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ವಾಟ್ಸಾಪ್ ಚಾನೆಲ್ ಆರಂಭಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಕಳೆದ ವಾರವಷ್ಟೇ ವಾಟ್ಸಾಪ್ ಚಾನೆಲ್ ನ ಹೊಸ ಆವಿಷ್ಕಾರವನ್ನು ಪರಿಚಯಿಸಲಾಗಿದೆ. ಸೆಪ್ಟೆಂಬರ್ 12ರಂದು ಸಿಎಂ ಚಾನೆಲ್ ಆರಂಭಿಸಿದ್ದು, 50 ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಜನರಿಗೆ ಬೆರಳ ತುದಿಯಲ್ಲಿಯೇ ಸರ್ಕಾರದ ದೈನಂದಿನ ಮಾಹಿತಿ ಒದಗಿಸಿ ಆಡಳಿತ ಪಾರದರ್ಶಕವಾಗಿಸಲು ಈ ವಾಟ್ಸಾಪ್ ಚಾನೆಲ್ ಕಾರ್ಯಾರಂಭ ಮಾಡಲಾಗಿದೆ. Chief Minister of Karnataka ಎಂದು ಸರ್ಚ್ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ವಾಟ್ಸಾಪ್ ಚಾನಲ್ ಫಾಲೋ ಮಾಡಬಹುದಾಗಿದೆ.