ಜೀವಕ್ಕೆ ಕುತ್ತು ತಂದ ಮದ್ಯ ಸೇವನೆ ಚಾಲೆಂಜ್ – ಸೇವಿಸಿದ ಅರ್ಧ ಗಂಟೆಯಲ್ಲಿ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಹೊಳೆನರಸೀಪುರ, ಸೆ. 20. ಮದ್ಯ ಸೇವನೆ ಸಂಬಂಧ ನಡೆದ ಪಂದ್ಯದಲ್ಲಿ ಓರ್ವ ಮೃತಪಟ್ಟ ಘಟನೆ ತಾಲೂಕಿನ ಸಿಗರನಹಳ್ಳಿಯಲ್ಲಿ ನಡೆದಿದೆ.


ಮೃತರನ್ನು ತಿಮ್ಮೇಗೌಡ ಎಂದು ಗುರುತಿಸಲಾಗಿದೆ. ಸಿಗರನಹಳ್ಳಿ ಗ್ರಾಮದ ಬಸ್‌ ನಿಲ್ದಾಣದಲ್ಲಿ ಕೃಷ್ಣೇಗೌಡ ಎಂಬವರು ನೀಡಿದ ಮದ್ಯವನ್ನು ದೇವರಾಜು ಹಾಗೂ ತಿಮ್ಮೇಗೌಡ ಎಂಬವರು ಅರ್ಧ ಗಂಟೆಯಲ್ಲಿ 90 ಎಂಎಲ್‌ನ 10 ಪ್ಯಾಕೆಟ್‌ ಕುಡಿಯುವುದಾಗಿ ಚಾಲೆಂಜ್‌ ಮಾಡಿದ್ದರು. ಅದರಂತೆ ತಿಮ್ಮೇಗೌಡರು 90 ಎಂಎಲ್‌ನ 10 ಪ್ಯಾಕೆಟ್‌ ಮದ್ಯ ಸೇವಿಸಿದ ಅರ್ಧ ಗಂಟೆ ಬಳಿಕ ರಕ್ತವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಎತ್ತಿಕೊಂಡು ಹೋಗಿ ಮನೆಯಲ್ಲಿ ಮಲಗಿಸಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ನಿತ್ರಾಣಗೊಂಡಿದ್ದ ತಿಮ್ಮೇಗೌಡ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ನಗರ ಪೊಲೀಸ್‌ ಠಾಣೆಯಲ್ಲಿ ಮೃತರ ಪುತ್ರಿ ನೀಡಿದ ದೂರಿನಂತೆ ದೇವರಾಜ ಹಾಗೂ ಕೃಷ್ಣೇಗೌಡರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

Also Read  ಮಂಗಳೂರು: ಶಾಲಾ ವಿವಾದ - ಶಾಸಕರು, ಕಾರ್ಪೊರೇಟರ್ ಸಹಿತ ಹಲವರ ವಿರುದ್ಧ ‌ಪ್ರಕರಣ ದಾಖಲು‌

error: Content is protected !!
Scroll to Top